ADVERTISEMENT

ಕುಡಿವ ನೀರಿಗೆ ₨ 250 ಕೋಟಿ ಯೋಜನೆ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 6:46 IST
Last Updated 21 ಸೆಪ್ಟೆಂಬರ್ 2013, 6:46 IST

ಆಲಮಟ್ಟಿ: ವಿಜಾಪುರ ಜಿಲ್ಲೆಯ ಎಲ್ಲ ಹಳ್ಳಿಗಳು ಬೇಸಿಗೆಯಲ್ಲಿಯೂ ಕುಡಿ ಯುವ ನೀರಿನ ಸಮಸ್ಯೆಯಿಂದ ಮುಕಿ್ತ ಹೊಂದಲು, 250 ಕೋಟಿ ರೂಪಾಯಿ ವೆಚ್ಚದ ಸಮಗ್ರ ಕುಡಿಯುವ ನೀರಿನ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಕಪಿಲ ಮೋಹನ ಹೇಳಿದರು.

ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ  ಉದ್ದೇಶಿಸಿ ಮಾತನಾಡಿದರು.ಮಳೆಗಾಲದಲ್ಲಿಯೂ ಇಂಡಿ ತಾಲ್ಲೂ ಕಿನ ಕೆಲ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಪರಿಸ್ಥಿತಿ ಇದ್ದು, ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಯಿಂದ ಹಾಗೂ ಜಿಲ್ಲೆಯಲ್ಲಿ ಹಾಯ್ದು ಹೋಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ವಿವಿಧ ಕಾಲುವೆಗಳಿಂದಲೂ ನೀರು ಪೂರೈಕೆಯ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಇಂಡಿ ಶಾಖಾ ಕಾಲುವೆ, ಮುಳವಾಡ ಏತ ನೀರಾವರಿ ಯೋಜನೆ ಹಂತ-3, ಇಂಡಿ ಏತ ನೀರಾವರಿ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆ ಯಡಿ ಒಳಪಡುವ ಗ್ರಾಮಗಳಿಗೆ ಕಾಲುವೆಗಳ ಮೂಲಕ ನೀರು ಪೂರೈಕೆ ಯಾಗುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ಇಲಾಖೆ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿ ಗಳು ಜಂಟಿಯಾಗಿ ವಿಸ್ತೃತ ಯೋಜನಾ ವರದಿಯನ್ನು ಎರಡು ತಿಂಗಳೊಳಗೆ ತಯಾರಿಸುವಂತೆ ಆ ಎರಡು ಇಲಾ ಖೆಯ ಅಧಿಕಾರಿಗಳಿಗೆ ಕಪಿಲ ಮೋಹನ ಸೂಚಿಸಿದರು.

ಸರಕಾರಕ್ಕೆ ಸಲ್ಲಿಸಲಾಗುವ 250 ಕೋಟಿ ರೂ ವೆಚ್ಚದ ಪ್ರಸ್ತಾವನೆಯಲ್ಲಿ ಜಿಲ್ಲೆಯ ಪುನರ್ವಸತಿ ಕೇಂದ್ರಗಳಿಗೂ ನೀರಿನ ಪೂರೈಕೆಯ ವ್ಯವಸ್ಥೆ ಹೊಂದಿರ­ಬೇಕು ಎಂದರು. ಜಿಲ್ಲೆಯ ಇಂಡಿ, ಸಿಂದಗಿ, ಬಾಗೇ­ವಾಡಿ ತಾಲ್ಲೂಕುಗಳು ಹೆಚ್ಚು ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿವೆ, ಅವುಗಳಿಗೆ ಕೃಷ್ಣಾ ಕಾಲು ವೆಯ ಮೂಲಕ ನೀರು ಪೂರೈಸ ಬಹುದು ಎಂದು ಆಲಮಟ್ಟಿಯ ಮುಖ್ಯ ಎಂಜಿನಿಯರ್ ಸಿ.ಅನಂತರಾಮು ಹಾಗೂ ಕಾರ್ಯಪಾಲಕ ಎಂಜಿನಿಯರ್ ಎಸ್.ಎಂ. ಕೊಲ್ಹಾರ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿರುವ ಸಣ್ಣ ನೀರಾವರಿ ಇಲಾಖೆಯ ವಿವಿಧ ಕೆರೆಗಳ ಹೂಳು ತೆಗೆದು ಅವುಗಳಲ್ಲಿ ಬೇಸಿಗೆಯಲ್ಲಿಯೂ ನೀರು ನಿಲ್ಲುವಂತೆ ಮಾಡಬೇಕು, ಅಲ್ಲದೇ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಅಡಿಯಲ್ಲಿ ಒಳಪಡುವ ಜಿಲ್ಲೆಯ ಕೆರೆಗಳ ಮಾಹಿತಿ ನೀಡಿದರೇ, ಅಲ್ಲಿಯೂ ಕಾಲುವೆಯ ಮೂಲಕ ನೀರು ತುಂಬಿಸುವ ಯೋಜನೆ ರೂಪಿ ಸಲು ಅನುಕೂಲವಾಗುತ್ತದೆ, ಮೂರನೇ ಹಂತದ ಯೋಜನೆಯಡಿ ಕಾಲುವೆ ಸಮೀಪದ ಕೆರೆಗಳಿಗೂ ನೀರು ತುಂಬಲು ಕ್ರಮ ಕೈಗೊಳ್ಳಲಾಗುವುದು ಎಂದು ಕಪಿಲ ಮೋಹನ ತಿಳಿಸಿದರು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದುಂಟಾದ ಅತಿವೃಷ್ಟಿ ಹಾಗೂ ಬರುವ ಬೇಸಿಗೆಯಲ್ಲಿ ಕುಡಿ ಯುವ ನೀರಿನ ತೊಂದರೆಯಾಗದಂತೆ ಈಗಿನಿಂದಲೆ ತಯಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ಇಲಾಖೆಯ ಪ್ರಗತಿ ಪರಿ ಶೀಲಿ ಸಲಾಯಿತು. ಶೌಚಾಲಯ, ಉದ್ಯೋಗ ಖಾತ್ರಿ ಯೋಜನೆ, ಕೃಷಿ, ಮಳೆಯ ಪ್ರಮಾಣ, ಮಳೆ ಹಾನಿ ಕುರಿತು ಚರ್ಚಿ ಸಲಾಯಿತು.  ಜಿಲ್ಲೆಯ ವಿವಿಧ ಇಲಾ ಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿಪಂ ಸಿಇಒ ಕೆ.ಬಿ ಶಿವ ಕುಮಾರ, ಎನ್. ಎಸ್.ಪಟ್ಟೇದ, ಇ.ಟಿ. ಕೆಂಗನಾಳ, ಕೆಬಿ ಜೆಎನ್ಎಲ್ ಅಧಿಕಾರಿ ಗಳಾದ ಅನಂತ ರಾಮು, ವಿ.ಕೆ ಪೋತ ದಾರ, ಎಚ್. ಎಸ್. ಮಂಜಪ್ಪ, ತಹ ಶೀಲ್ದಾರ ಅಪರ್ಣಾ ಪಾವಟೆ ಸೇರಿದಂತೆ ಎಲ್ಲ ತಾಲ್ಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.