ADVERTISEMENT

ಖಾದಿ ಧರಿಸಿ ಗಾಂಧಿಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 11:10 IST
Last Updated 26 ಸೆಪ್ಟೆಂಬರ್ 2011, 11:10 IST

ವಿಜಾಪುರ: ಮಹಾತ್ಮಾ ಗಾಂಧೀಜಿ ಅವರ ಜಯಂತಿ ಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ 2ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮ, ಬೀದಿ ಸ್ವಚ್ಛತೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ  ವಿವಿಧ ಸ್ಪರ್ಧೆಗಳು ಹಾಗೂ  ಖಾದಿ ದಿನ ಆಚರಿಸಲು ನಿರ್ಧರಿಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಜಿ.ಎಸ್. ಜಿದ್ದಿಮನಿ ಅವರ ಅಧ್ಯಕ್ಷತೆ ಯಲ್ಲಿ ನಡೆದ ಗಾಂಧಿ ಜಯಂತಿ ಪೂರ್ವ ಸಿದ್ಧತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಗಾಂಧಿ ಜಯಂತಿಯ ದಿನದಂದು ಎಲ್ಲ ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ಖಾದಿ ಉಡುಪು ಧರಿಸುವುದು ಹಾಗೂ ವಾರಕ್ಕೊಮ್ಮೆ ಸ್ವ-ಇಚ್ಛೆಯಿದ ಸರ್ಕಾರಿ ನೌಕರರು ಕಚೇರಿಗೆ  ಖಾದಿ ಉಡುಪು ಧರಿಸಿ ಬರುವ  ಕುರಿತಂತೆ ಜಿಲ್ಲಾಡಳಿ ತದಿಂದ ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಗಾಂಧಿ ಜಯಂತಿ ದಿನ ಬೆಳಿಗ್ಗೆ 9ಕ್ಕೆ  ನಗರದ ಗಾಂಧಿ ವೃತ್ತದಲ್ಲಿ ಜಿಲ್ಲಾಡಳಿತದ ವತಿಯಿಂದ ಸರ್ವಧರ್ಮ ಪ್ರಾರ್ಥನೆ, ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಕಾರ್ಯ ಕ್ರಮ ನಂತರ 10 ಗಂಟೆಗೆ ನಗರದ ಶಹಾಪೇಟೆ ಬಡಾವಣೆಯಲ್ಲಿ ಸಾಮೂ ಹಿಕ ಬೀದಿ ಸ್ವಚ್ಛತಾ ಕಾರ್ಯಕ್ರಮ ಹಾಗೂ 11ಕ್ಕೆ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಗಾಂಧೀಜಿಯ ವರ ತತ್ವ ಚಿಂತನೆಗಳ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲು ನಿರ್ಧರಿಸಲಾಯಿತು.

ಗಾಂಧಿ ಜಯಂತಿಯಂದು ಅಧಿಕಾರಿ ಗಳು ಹಾಗೂ ವಿವಿಧ ಸಂಘ-ಸಂಸ್ಥೆಯ ಪ್ರತಿನಿಧಿಗಳು ಕೂಡ ಸರಳತೆ ಹಾಗೂ ದೇಶಿಯ ಪ್ರತೀಕವಾದ ಖಾದಿ ಉಡು ಪನ್ನು ಧರಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸ ಲಾಯಿತು. ಹಾಗೂ ಜಿಲ್ಲೆಯ ಎಲ್ಲ ಸರ್ಕಾರಿ ನೌಕರ ರು ವಾರಕ್ಕೆ ಒಂದು ದಿನ ಕಚೇರಿಗೆ ಖಾದಿ ಬಟ್ಟೆ ಧರಿಸುವ ಕುರಿತಂತೆ ಜಿಲ್ಲಾಡಳಿತ ದಿಂದ ಪತ್ರ ಬರೆಯುವುದಾಗಿ ಸಭೆಯ ಮುಖಂಡರ ಮನವಿಯ ಮೇರೆಗೆ ಜಿಲ್ಲಾಧಿ ಕಾರಿಗಳು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮು ಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಎನ್.ಪಾಟೀಲ, ತಹಸೀಲ್ದಾರ ರಾಜಶ್ರೀ ಜೈನಾಪುರ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.