ADVERTISEMENT

ಗೊಳಸಂಗಿಯಲ್ಲಿ ಕಲಿಕೋತ್ಸವದ ಅಕ್ಷರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 5:49 IST
Last Updated 10 ಜನವರಿ 2014, 5:49 IST

ಆಲಮಟ್ಟಿ: ಸೇರಿದ್ದು ಸಹಸ್ರಾರು ಜನ, ಒಂದೆಡೆ ತಾಲ್ಲೂಕಿನ ಎಲ್ಲ ಸಮಗ್ರ ಶೈಕ್ಷಣಿಕ ಮಾಹಿತಿಗಳ ಫಲಕಗಳು, ಇನ್ನೊಂದೆಡೆ ಜ್ಞಾನ ದಾಸೋಹದ ಕೇಂದ್ರಗಳಾಗಿದ್ದ ಮಳಿಗೆಗಳು.. ಮತ್ತೊಂ ದೆಡೆ ನಾಟಕ, ಪಠ್ಯಕ್ಕೆ ಸಂಬಂಧಿಸಿದ 30 ಸ್ಪರ್ಧೆಗಳು.... ಡೊಳ್ಳು ಬಾರಿಸಿದ, ಕುಂಭ ಹೊತ್ತ ವಿದ್ಯಾರ್ಥಿನಿಯರು.......

ಇವೆಲ್ಲ ಗುರುವಾರ ಗೊಳಸಂಗಿ ಯಲ್ಲಿ ಕಂಡು ಬಂದ ಬಸವನಬಾಗೇ ವಾಡಿ ತಾಲ್ಲೂಕು ಮಟ್ಟದ ಕಲಿಕೋ ತ್ಸವದ ನಾನಾ ದೃಶ್ಯಗಳು....!
ಇದರ ರೂವಾರಿ ಬಸವನಬಾಗೇ ವಾಡಿ ಬಿಇಒ ಎನ್.ಎಚ್. ನಾಗೂರ ಹಾಗೂ ಬಿಆರ್‌ಸಿಒ ಎಂ.ಎ.ಗುಳೇದ ಗುಡ್ಡ ಅವರ ತಂಡ. ಅವರ ಕಲ್ಪನೆ ಯಲ್ಲಿ ಮೂಡಿ ಬಂದ ಕಲಿಕೋತ್ಸವ ರಾಜ್ಯದಲ್ಲಿಯೇ ವಿಶೇಷ ಎಂಬಂತೆ ತೋರಿ ಬಂತು.

ವಿದ್ಯಾರ್ಥಿಗಳು, ಶಿಕ್ಷಕರು ತಯಾ ರಿಸಿದ ವಿಜ್ಞಾನ, ಇಂಗ್ಲಿಷ್‌, ಗಣಿತ, ನಲಿಕಲಿ, ಭಾಷೆಗೆ ಸಂಬಂಧಿಸಿದ ಕಲಿ ಕೋಪಕರಣಗಳು, ಸರಳ ಪ್ರಯೋಗ ಗಳು ಮಳಿಗೆಯಲ್ಲಿ ಪ್ರದರ್ಶನಗೊಂಡು ಮಕ್ಕಳ ಕುತೂಹಲವನ್ನು    ಹೆಚ್ಚಿಸಿದವು.

ಕಲಿಕೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಾವ್ಯಾ ದೇಸಾಯಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರಾವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಕೆ.ಜಿ. ಸುಂದರ ಮಾತನಾಡಿ, ಸ್ಪಷ್ಟ ಓದು, ಶುದ್ಧ ಬರಹ, ಸರಳ ಗಣಿತ, ಸಾಮರ್ಥ್ಯ ವಿಕಾಸ ಅಭಿವ್ಯಕ್ತಿ ಹಾಗೂ ವಿಶೇಷ ಕಲಿಕೆ ಸಾಧಿಸಿರುವ ಮಕ್ಕಳು ಇತರೇ ಮಕ್ಕಳಿಗೆ ಪ್ರೇರಣೆಯಾಗಲಿ ಎಂದರು.

ಶಾಲೆಗಳ ಕಟ್ಟಡಗಳ ದುರಸ್ತಿಗಾಗಿ ರೂ 4 ಕೋಟಿ ಅನುದಾನ ಬಿಡುಗಡೆ ಯಾಗಿದೆ. ಗೊಳಸಂಗಿಯಲ್ಲಿ ಮಕ್ಕಳು, ಪಾಲಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಂತೆ ಸೇರಿರು ವುದು ಸಂತಸಕರ ಎಂದರು.

ಸಾ.ಶಿ.ಇ. ಉಪನಿರ್ದೇಶಕ ಸಂಗಮೇಶ ಹಳಿಂಗಳಿ ಮಾತನಾಡಿ, ಮಕ್ಕಳ ಕಲಿಕೆಯೆ ನಮ್ಮ ಆದ್ಯ ಕರ್ತವ್ಯ ವಾಗಿದ್ದು, ಇನ್ನಿತರ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಮಕ್ಕಳ ಕಲಿಕೆಯ ಪ್ರಗತಿಯ ಕಡೆ ಗಮನಹರಿಸಬೇಕು, ಕಾರ್ಯರ್ಕ್ರಮವನ್ನು ಅಚ್ಚುಕಟ್ಟಾಗಿ ಹಮ್ಮಿಕೊಂಡ ಬಿಇಒ ನಾಗೂರ ಕಾರ್ಯ ಶ್ಲಾಘನೀಯ ಎಂದರು.

ಬಿಇಓ ಎನ್.ಎಚ್. ನಾಗೂರ, ಬಿಆರ್‌ಸಿಒ ಮಂಜುನಾಥ ಗುಳೇದ ಗುಡ್ಡ, ಎನ್‌ಟಿಪಿಸಿ ಜನರಲ್ ಮ್ಯಾನೇಜರ್ ಎ.ಕೆ.ಸಾವಂತ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಮ್ಮ ಮುತ್ತತ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ರಾದ ಶಿವಾನಂದ ಅವಟಿ, ಚಂದ್ರಶೇಖ ರಗೌಡ ಪಾಟೀಲ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಶೇಖರ ದಳವಾಯಿ, ಬಂದೇನವಾಜ್‌ ಡೋಲಚಿ, ಮುರಗೇಶ ಹೆಬ್ಬಾಳ, ಸುರೇಶ ದಳವಾಯಿ, ಶಿವ ಯೋಗಿ ಬಿದರಿ, ಕಾ.ಹು. ಬಿಜಾಪುರ, ವೈ.ಎಸ್.ಪಾಟೀಲ, ನಾರಾಯಣ ಕಿರಗತ, ತಹಮುಲ್ಲಖಾದ್ರಿ ಜಾಗೀರ ದಾರ, ಶಿವಾನಂದ ಮಂಗಾನವರ, ಎಚ್.ಎ. ನಾಡಗೌಡ, ಅರ್ಜುನ ಪವಾರ ಮೊದಲಾದವರು ವೇದಿಕೆಯ ಮೇಲಿದ್ದರು.

ಯರನಾಳ ಉಕ್ಕಲಿಯ ಗುರು ಸಂಗನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಕನ್ನಡ ಹೆಣ್ಣು ಮಕ್ಕಳ ಶಾಲೆಯ ಕಟ್ಟಡಕ್ಕೆ ಬೆಲೆಬಾಳುವ 120X40 ನಿವೇಶನವನ್ನು ದಾನವಾಗಿ ನೀಡಿದ ನಾರಾಯಣ ಕಿರಗತ ಅವರನ್ನು ಸನ್ಮಾನಿ ಸಲಾಯಿತು.

ಎಸ್.ಎಸ್. ಹೊಸಮನಿ ಸ್ವಾಗತಿಸಿ ದರು. ಎಸ್.ಎಂ. ತಾವರಖೇಡ, ಎಂ. ಎಚ್. ಬಾರಿಕಾಯಿ ರೂಪಿಸಿದರು.  ಸಿ.ಎ.ಅವಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.