ADVERTISEMENT

ಗೌರವದ ಜೀವನವೇ ಮಾನವ ಹಕ್ಕುಗಳ ರಕ್ಷಣೆ: ಪಾಂಡೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 4:07 IST
Last Updated 18 ಡಿಸೆಂಬರ್ 2013, 4:07 IST

ವಿಜಾಪುರ: ‘ಎಲ್ಲ ಹಕ್ಕುಗಳು ಪ್ರತಿಯೊ ಬ್ಬರಿಗೂ ದೊರಕಬೇಕು ಮತ್ತು  ಅವರು ಗೌರವಯುತವಾಗಿ ಜೀವನ ನಡೆಸ ಬೇಕು. ಮಾನವ ಹಕ್ಕುಗಳ ಉದ್ದೇಶವೂ ಇದೇ ಆಗಿದೆ’ ಎಂದು  ಜಿಲ್ಲಾಧಿಕಾರಿ ರಿತ್ವಿಕ್ ರಂಜನ್ ಪಾಂಡೆ ಹೇಳಿದರು.

ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಜಿಲ್ಲಾ ಆಡಳಿತದ ಸಹ ಯೋಗದಲ್ಲಿ ಮಂಗಳವಾರ ಇಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳ ಕುರಿತ ಒಂದು ದಿನದ  ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಎಎಸ್‌ಪಿ ಆರ್. ಚೇತನ ಮಾತ ನಾಡಿ, ‘ಮಾನವ ಹಕ್ಕುಗಳ ಪರ ಸಂಘಟ ನೆಗಳು ಅಪರಾಧಿಗಳ ಹಕ್ಕುಗಳಿಗೆ ಹೋರಾಡದೆ ನೋಂದವರ ಪರವಾಗಿ ಹೋರಾಡಬೇಕು’ ಎಂದರು.

156 ಜನರಿಗೆ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ಕೆಲಸ ನಿರ್ವಹಿಸಬೇಕು. ಆದರೆ, ಈಗ ಪ್ರತಿ 600 ಜನರಿಗೆ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಪೊಲೀಸ್‌ ಇಲಾಖೆ ಮಾನವ ಹಕ್ಕುಗಳ ಉಲ್ಲಂಘ ನೆಯಾಗದಂತೆ ಎಚ್ಚರ ವಹಿಸುತ್ತ ಕೆಲಸ ಮಾಡುತ್ತಿದೆ. ಮಾನವ ಹಕ್ಕುಗಳ ರಕ್ಷಣೆ ಯಲ್ಲಿ ಪೊಲೀಸ್‌ ಇಲಾಖೆಯೊಂದಿಗೆ ಸಮಾಜವೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಸರ್ಕಾರಿ ವಕೀಲ ಆರ್.ಪಿ. ಭಿಡೆ, ‘ಆರೋಗ್ಯ, ಶಿಕ್ಷಣ, ಆಹಾರ, ಮನೆ, ಮುಂತಾದ ಮೂಲಭೂತ ಸೌಕರ್ಯಗಳು ಸಾಮಾನ್ಯರಿಗೆ ದೊರಕು ವಂತಾಗಬೇಕು. ಅಂದಾಗ ಮಾತ್ರ ಮಾನವ ಹಕ್ಕುಗಳ ರಕ್ಷಣೆಯಾಗುತ್ತದೆ’ ಎಂದರು.

ಕೇಂದ್ರ ಕಾರಾಗೃಹದ ಅಧೀಕ್ಷಕಿ ಅನಿತಾ ಆರ್., ‘ಜೈಲು ಶಿಕ್ಷೆಯಾದ ಖೈದಿಗಳಿಗೆ ಜೈಲಿನಲ್ಲಿಯೂ ಸಹ ಮಾನವ ಹಕ್ಕುಗಳ ರಕ್ಷಣೆಗಾಗಿ ಕೆಲ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಖೈದಿಗಳಿಗೆ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಿ ಅವರ ಮನ ಪರಿವರ್ತನೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ನಗರ ಕಾರಾಗೃಹದಿಂದ ಖೈದಿಗಳ ಎರಡು ಕ್ರೀಡಾ ತಂಡಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದೆ’ ಎಂದು ಹೇಳಿದರು. 

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಾವ್ಯ ಕಲ್ಲಪ್ಪ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಉಜ್ವಲಾ ಸರನಾಡಗೌಡ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ವಾಸುದೇವ ತೋಳಬಂದಿ ಮಾತನಾಡಿದರು. ಹೆಚ್ಚು ವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಉಪವಿಭಾಗಾಧಿಕಾರಿ ಡಾ.ಎಚ್. ಬೂದೆಪ್ಪ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿ ದ್ದರು. ಎಚ್.ಎ. ಮಮದಾಪುರ ನಿರೂ ಪಿಸಿದರು. ತಹಶೀಲ್ದಾರ ಜಿ.ಆರ್‌. ಶೀಲವಂತರ  ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.