ADVERTISEMENT

ಜೊತೆಯಾಗಿ ತೆರಳಿದ ಪಕ್ಷೇತರ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 10:20 IST
Last Updated 17 ಏಪ್ರಿಲ್ 2013, 10:20 IST

ಮುದ್ದೇಬಿಹಾಳ: ವಿಧಾನಸಭೆ ಚುನಾವಣೆಗೆ ಮಂಗಳವಾರ ಬಿ.ಎಸ್.ಪಿ. ಪರವಾಗಿ ರವಿ ಸಜ್ಜನ, ಹಾಗೂ  ಪಕ್ಷೇತರರಾಗಿ ಕಾಶಿಮಪಟೇಲ್ ಪಟೇಲ್,  ಮಹಿಬೂಬ್ ಹಳ್ಳಿ ವಕೀಲರು  ನಾಮಪತ್ರ ಸಲ್ಲಿಸುವು ದರೊಂದಿಗೆ ಇಲ್ಲಿಯವರೆಗೆ ಒಟ್ಟು 9 ಜನರಿಂದ 13 ನಾಮಪತ್ರಗಳು ಸಲ್ಲಿಕೆಯಾಗಿವೆ.

ಅಚ್ಚರಿಯ ಬೆಳವಣಿಗೆಯಲ್ಲಿ ಮಂಗಳವಾರ ಪಕ್ಷೇತರ ಅಭ್ಯರ್ಥಿಗಳಾದ ಕಾಶಿಮಪಟೇಲ್ ಪಟೇಲ್ ಹಾಗೂ ಮಹಿಬೂಬ್ ಹಳ್ಳಿ ವಕೀಲರು ನಾಮಪತ್ರ ಸಲ್ಲಿಸುವ ಮುನ್ನ ಪರಸ್ಪರ ಶುಭ ಕೋರಿದರಲ್ಲದೇ ಜೊತೆಯಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿದರು.

ಪಾದಯಾತ್ರೆಯಲ್ಲಿ ಖ್ಯಾತ ವೈದ್ಯರಾದ ಡಾ.ಎ.ಎಂ.ಮುಲ್ಲಾ, ನಿವೃತ್ತ ತಹಶೀಲ್ದಾರ ಎಂ.ಕೆ. ಬಾಗವಾನ,  ಸಿದ್ದನಗೌಡ ಪಾಟೀಲ, ಡಿ.ಡಿ.ಬಾಗವಾನ, ಎಂ.ಎ.ಲಿಂಗಸೂರ ವಕೀಲರು, ಆರ್.ಜಿ.ಕುಲಕರ್ಣಿ, ಬಾಬುರಾವ ಜಾಧವ ತಾಳಿಕೋಟಿ, ಎಚ್.ಆರ್.ಕುಲಕರ್ಣಿ, ಶಿವು ಚಿನಿವಾರ, ಅಲ್ಲಾಭಕ್ಷ ಖಾಜಿ, ಮಹಮ್ಮದ ರಫೀಕ ನದಾಫ, ಟಕ್ಕಳಕಿ ಮಿಲಿಟರಿ, ರಹಿಮಾನ ಚೌಧರಿ, ಮಹಿಬೂಬ ಅತ್ತಾರ , ಅಪ್ಪು ಬಿರಾದಾರ, ಅಬ್ದುಲ ವಹಾಬ ಮೋಮೀನ, ರಜಾಕ ಮಕಾನದಾರ, ಪುರಸಭೆ ಸದಸ್ಯ ಮಹಿಬೂಬ ಗೊಳ ಸಂಗಿ ಮಹಮ್ಮದ ರಫೀಕ ಅಂತರಗಂಗಿ, ಮೈನುದ್ದೀನ ನಾಯ್ಕೋಡಿ, ಸಯ್ಯದ ಕುಮಶಿ, ಕಿರಾದಲಿ ಹಣಗಿ, ಕಾಕಂಡಕಿ ಹೊಸಮನಿ, ಪಾಟೀಲ, ಎಚ್.ಆರ್. ಕುಲಕರ್ಣಿ ವಕೀಲರು  ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.