ADVERTISEMENT

ತಂಬಾಕು ಸೇವನೆ ಮೃತ್ಯುವಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 5:40 IST
Last Updated 1 ಜೂನ್ 2011, 5:40 IST

ಚಡಚಣ: ತಂಬಾಕು ಸೇವನೆಯೆಂದರೆ ಮೃತ್ಯುವಿಗೆ ಆಹ್ವಾನ ನೀಡಿದಂತೆ. ಕ್ಯಾನ್ಸರ್‌ಗೆ ಕಾರಣವಾಗುವ ತಂಬಾಕು ಸೇವನೆಯಿಂದ ಸೇವನೆ ಮಾಡುವ ವ್ಯಕ್ತಿಗಳಿಗಲ್ಲದೆ, ಸುತ್ತಲಿನ ಅಮಾಯಕ ಜನರಿಗೂ ಮಾರಕವಾಗಿ ಪರಿಣಮಿಸು ವುದು ಎಂದು ಎನ್‌ಸಿಸಿ ಅಧಿಕಾರಿ ಮೇಜರ್ ಡಾ. ಎಸ್.ಎಸ್. ಚೋರಗಿ ಹೇಳಿದರು.

ಸ್ಥಳೀಯ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆಗಳ ಎನ್‌ಸಿಸಿ ಘಟಕಗಳ ಆಶ್ರಯ ದಲ್ಲಿ ಮಂಗಳವಾರ ಆಯೋಜಿಸಲಾದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಒಂದರಲ್ಲಿಯೇ ಪ್ರತಿ ವರ್ಷ 9 ಲಕ್ಷ ಜನ ಸಾವನ್ನಪ್ಪುತ್ತಾರೆ. ಜಗತ್ತಿನಲ್ಲಿ ಪ್ರತಿ ವರ್ಷ ಆರು  ದಶಲಕ್ಷ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲಿ ಮಹಿಳೆಯರ ಪಾಲು ಶೇ 5ರಷ್ಟು ಎಂದರು.

ಮೂರು ತಿಂಗಳಿನ ತಂಬಾಕು ಸೇವನೆ 6 ವರ್ಷಗಳ ಆಯುಷ್ಯವನ್ನು ಕುಂದಿಸು ತ್ತದೆ ಎಂದ ಅವರು ವಿದ್ಯಾರ್ಥಿಗಳು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ಸಾರ್ವಜನಿಕರಿಗೆ ತಿಳಿ ಹೇಳುವಂತೆ ಮನವಿ ಮಾಡಿದರು.

ಜೆಡಿ.ಎನ್‌ಸಿಸಿ ಅಧಿಕಾರಿ ಎಂ.ಐ. ಅಮರಖೇಡ, ಎನ್‌ಸಿಸಿ ಕೆಡೆಟ್‌ಗಳಿಗೆ ತಂಬಾಕು ಸೇವಿಸದಿರಲು ಪ್ರಮಾಣ ವಚನ ಬೋಧಿಸಿದರು.

ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎನ್‌ಸಿಸಿ ಕೆಡೆಟ್‌ಗಳು ಜಾಗೃತಿ ಜಾಥಾ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.