ADVERTISEMENT

`ತಾಲ್ಲೂಕು ಸಮಗ್ರ ನೀರಾವರಿಗೆ ಪ್ರಥಮ ಆದ್ಯತೆ'

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:02 IST
Last Updated 5 ಸೆಪ್ಟೆಂಬರ್ 2013, 6:02 IST

ಆಲಮಟ್ಟಿ: ಬಸವನ ಬಾಗೇವಾಡಿ ಮತಕ್ಷೇತ್ರ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೆ ಸಮಗ್ರ ನೀರಾವರಿ ಕಲ್ಪಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ತಿಳಿಸಿದರು.

ಸಮೀಪದ ಮುಕಾರ್ತಿಹಾಳ ಗ್ರಾಮ ದಲ್ಲಿ ಶ್ರಾವಣ ಮಾಸ ಪ್ರಯುಕ್ತ ನಡೆದ ದಾನಮ್ಮ ದೇವಿ ಪ್ರವಚನದ ಮಹಾ ಮಂಗಲ, ಚಂದ್ರಶೇಖರ ಶಿವಾ ಚಾರ್ಯರ ಮೌನ ಅನುಷ್ಠಾನ ಸಮಾಪ್ತಿ, ಶ್ರಿಗಳ ಅಡ್ಡಪಲ್ಲಕ್ಕಿ ಮಹೋತ್ಸವ, ತುಲಾಭಾರ, ಕುಂಭ ಮೇಳ ಮತ್ತೀತರ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ನೀರಾವರಿ 10 ಸಾವಿರ ಕೋಟಿ ರೂ ಹಣವನ್ನು ಮೀಸ ಲಿಡುತ್ತಿದ್ದು, ಆ ಹಣದಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರ ಸೇರಿದಂತೆ ಇಡೀ ಜಿಲ್ಲೆ ನೀರಾವರಿಯಾಗಲಿದೆ, ಪ್ರಚಲಿತ ದಿನಗಳಲ್ಲಿ ಧಾರ್ಮಿಕ ಚಿಂತನೆಯ ಜೊತೆಗೆ ಅಧಃಪತನಕ್ಕಿಳಿಯುತ್ತಿರುವ ನೈತಿಕತೆಯನ್ನು ಉಳಿಸಿ ಬೆಳೆಸುವಲ್ಲಿ ವಿವಿಧ ಶ್ರಿಗಳ ಪಾತ್ರ ಅಮೂಲ್ಯ ವಾಗಿದೆ.

ಗ್ರಾಮದ ಜನತೆ ಸಲ್ಲಿಸಿದ ಅಹವಾಲುಗಳಲ್ಲಿ ಹಿರಿಯರ ಜೊತೆ ಚರ್ಚಿಸಿ ಆದ್ಯತೆಯ ಮೇರೆಗೆ ಪರಿಹರಿ ಸುವುದಾಗಿ ತಿಳಿಸಿದರು.
ಚಿಮ್ಮಲಗಿ ಹಿರೇಮಠದ ನೀಲಕಂಠ ಸ್ವಾಮೀಜಿ, ಹತ್ತಳ್ಳಿ ಹಾವಿನಾಳದ  ಗುರುಪಾದೇಶ್ವರ ಸ್ವಾಮೀಜಿ, ಬಸವನ ಬಾಗೇವಾಡಿಯ ಶ್ರಿಗಳು, ತಡವಲಗಾ ರಾಚೋಟೇಶ್ವರ ಸ್ವಾಮೀಜಿ, ಲಕ್ಷ್ಮೇಶ್ವ ರದ ಸಿದ್ದರಾಮ ದೇವರು ಸಾನಿಧ್ಯ ವಹಿಸಿದ್ದರು.

ಮುಕಾರ್ತಿಹಾಳ ಗ್ರಾಮದ ಈರಪ್ಪ ಮೂಲಿಮನಿ ದಂಪತಿ ನಾಣ್ಯಗಳ ತುಲಾ ಭಾರ ಸ್ವೀಕರಿಸಿ  ಚಂದ್ರಶೇಖರ ಸ್ವಾಮೀಜಿ ಆಶೀರ್ವಚನ ನೀಡಿದರು.

ಜಿ.ಪಂ ಸದಸ್ಯ ಗೌರಮ್ಮ ಮುತ್ತತ್ತಿ, ತಾಪಂ ಅಧ್ಯಕ್ಷ ಕಲ್ಲು ಸೊನ್ನದ, ತಾಪಂ ಸದಸ್ಯ ಬಂದೇನವಾಜ ಡೋಲಚಿ, ತಾಪಂ ಮಾಜಿ ಸದಸ್ಯ ಶೇಖರ ದಳವಾಯಿ, ಗ್ರಾ.ಪಂ ಅಧ್ಯಕ್ಷೆ ಮಲ್ಲಮ್ಮ ಮುಮ್ಮದಕೋಟೆ, ಪ್ರಮುಖರಾದ ವಿ.ಎಸ್. ಪಾಟೀಲ, ರಮೇಶ ಸೂಳಿ ಭಾವಿ, ಸಂಗನಗೌಡ ಚಿಕ್ಕೊಂಡ ಶಶಿಧರ ಮಾಮನಿ, ದೇವಜಪ್ಪಗೌಡ ಬಿರಾ ದಾರ, ಸಾಬಣ್ಣ ಮಸಬಿನಾಳ, ಶಿವಪ್ಪ ಗುಡದಿನ್ನಿ, ಗುರಪ್ಪ ತೋಟದ, ಗುರಪ್ಪ ವಂದಾಲ, ಮಲ್ಲಪ್ಪ ಮಾಮನಿ ಇತರರಿದ್ದರು.

ಯಶವಂತ ಬಡಿಗೇರ ಪ್ರಾರ್ಥಿಸಿ ದರು. ಪ್ರಭು ಮಾಮನಿ ಸ್ವಾಗತಿಸಿದರು. ಪಂಡಿತರತ್ನ ಸಿದ್ದರಾಮ ಸ್ವಾಮಿ ನಿರೂಪಿಸಿದರು. ಸುರೇಶ ಮಾಮನಿ ವಂದಿಸಿದರು.

ಪುರಾಣ ಪ್ರವಚಿಸಿದ ಬ್ಯಾಡಗಿ ಹಾಳದ ಸಿದ್ದರಾಮಸ್ವಾಮಿ, ಸಂಗೀತ ಸೇವೆ ನೀಡಿದ ಸಿದ್ದಯ್ಯಸ್ವಾಮಿ ಪಡ ದಳ್ಳಿ, ತಬಲಾವಾದಕ ಬಸವರಾಜ, ಯಶವಂತ ಬಡಿಗೇರ ಅವರನ್ನು ಸನ್ಮಾನಿ ಸಲಾಯಿತು. ಕೋಲಾಟ, ಸಾಂಪ್ರದಾ ಯಿಕ ನೃತ್ಯಗಳು ಗಮನಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.