ADVERTISEMENT

ಪರಿಹಾರ: ವೈಜ್ಞಾನಿಕ ಪದ್ಧತಿಗೆ ಆಗ್ರಹ

ರೈತ ಮುಖಂಡರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2016, 5:52 IST
Last Updated 21 ಜನವರಿ 2016, 5:52 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಬುಧವಾರ ತಹಶೀಲ್ದಾರ್ ಆರ್.ಆರ್. ಕೊಂಡಗೂಳಿ ಅವರಿಗೆ ಮನವಿ ಸಲ್ಲಿಸಿದರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಬುಧವಾರ ತಹಶೀಲ್ದಾರ್ ಆರ್.ಆರ್. ಕೊಂಡಗೂಳಿ ಅವರಿಗೆ ಮನವಿ ಸಲ್ಲಿಸಿದರು   

ಇಂಡಿ:  ತೀವ್ರ ಬರಗಾಲದಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಸರ್ಕಾರ ನೀಡುತ್ತಿರುವ ₹ 4500 ಪರಿಹಾರ ಧನ ಸಾಕಾಗದು. ವೈಜ್ಞಾನಿಕ ಪದ್ಧತಿ ಅನುಸರಿಸಿ ಬೆಳೆ ನಷ್ಟದ ಪರಿಹಾರ ನೀಡಬೇಕು ಎಂದು ತಾಲ್ಲೂಕಿನ ರೈತರು ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿ ಬುಧವಾರ ಮೆರವಣಿಗೆ ನಡೆಸಿದ ರೈತರು, ತಹಶೀಲ್ದಾರ್ ಕಚೇರಿಗೆ ಬಂದು ಪ್ರತಿಭಟನಾ ಸಭೆ ನಡೆಸಿದರು. ಸರ್ಕಾರ ಬರ ಪರಿಹಾರವಾಗಿ ಹೆಕ್ಟೇರ್‌ಗೆ ₹ 4,500 ನೀಡುತ್ತಿದೆ. ಇದರಲ್ಲಿ ಒಂದು ಗಾಡಿ ಮೇವು ಬರುವುದಿಲ್ಲ. ಇದನ್ನು ಪರಿ ಹಾರವಾಗಿ ಪಡೆದರೂ ರೈತರಿಗೆ ಏನನ್ನೂ ಮಾಡಲಾಗದು.  ಅದಕ್ಕಾಗಿ ವೈಜ್ಞಾನಿವಾಗಿ ಬೆಳೆ ಹಾನಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕಿನ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿಗೆ ಹಣ ಪಾವತಿ ಮಾಡುತ್ತಿಲ್ಲ. ಕಬ್ಬು ಕಳಿಸಿದ 15 ದಿನಗಳ ಒಳಗಾಗಿ ಹಣ ಪಾವತಿಸುವ ನಿಯಮವಿದೆ. ಆದರೆ 2 ತಿಂಗಳು ಕಳೆದರೂ ಹಣ ನಿಡಿಲ್ಲ. ಕೆಲವು ಕಾರ್ಖಾನೆಗಳಲ್ಲಿ ತೂಕ ಸರಿ ಯಾಗಿಲ್ಲ. ಇದನ್ನೆಲ್ಲ ಸರಿಪಡಿಸಿ, ರೈತರ ಸಮಸ್ಯೆ ಪರಿಹರಿಸಬೇಕು ಎಂದರು.

ರೈತ ಮುಖಂಡರಾದ ಬಿ.ಡಿ. ಪಾಟೀಲ, ಎಸ್.ಟಿ. ಪಾಟೀಲ, ಜಗನ್ನಾಥ ಇಂಡಿ, ಜಿತೇಂದ್ರ ಕಟ್ಟೀಮನಿ, ಚನ್ನುಗೌಡ ಪಾಟೀಲ, ಮಲ್ಲಿಕಾರ್ಜುನ ಶಿರಶ್ಯಾಡ, ಶಂಕರ ಬೋರಾಮಣಿ, ಮಹಾದೇವ ಗುಡ್ಡೋಡಗಿ, ಎನ.ಎಸ್. ದಿಂಡೂರ, ಎಸ್.ಎಸ್. ನಾವಿ, ಧರ್ಮ ಸಾಬ್ ಚಬನೂರ, ಶಿವಾನಂದ ಅಂಗಡಿ, ಎಚ್.ಜಿ. ಹಂಜಗಿ, ಎನ್.ಡಿ. ಮಾನೆ, ನಿಜಣ್ಣ ಮುಲ್ಲಾ, ಭೀರಪ್ಪ ಬಿರಾದಾರ, ಮಹಾದೇವ ಗುಡ್ಡೋಡಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.