ADVERTISEMENT

ಪಾಕ್ ಧ್ವಜ ಪ್ರಕರಣ: ಪೊಲೀಸ್ ಸಿಬ್ಬಂದಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 8:50 IST
Last Updated 17 ಜನವರಿ 2012, 8:50 IST

ಸಿಂದಗಿ: ಕಳೆದ ಡಿಸೆಂಬರ್ 31 ರ ರಾತ್ರಿ ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ಪಾಕ್ ಧ್ವಜ ಹಾರಿಸಿದ್ದ ದುಷ್ಕರ್ಮಿಗಳನ್ನು ಮೂರೇ ದಿನಗಳಲ್ಲಿ ಪತ್ತೆ ಹಚ್ಚಿದ ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಸೋಮವಾರ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಿದರು.

ಇಂಡಿ ಡಿವೈಎಸ್ಪಿ ಮುತ್ತುರಾಜ್ ಹಾಗೂ ಇನ್ಸ್‌ಪೆಕ್ಟರ್ ಚಿದಂಬರ ಅವರಿಗೆ ಬಿದರಿ ಬಹುಮಾನ ವಿತರಿಸಿದರು. ಆರೋಪಿಗಳ ಪತ್ತೆ ಹಚ್ಚಲು ರಚಿಸಿದ ನಾಲ್ಕು ತಂಡದ ಪೊಲೀಸರಿಗೆ ಈ ಹಣವನ್ನು ಹಂಚಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಡಿ.ಸಿ.ರಾಜಪ್ಪ ತಿಳಿಸಿದರು.

ಮುತ್ತುರಾಜ್, ಚಿದಂಬರ ಅವರಲ್ಲದೇ ಇನ್ಸ್‌ಪೆಕ್ಟರ್‌ಗಳಾದ ಸಿದ್ಧೇಶ್ವರ,  ಎಂ.ಎಸ್.ಬುಳ್ಳಕ್ಕನವರ, ಚಂದ್ರಕಾಂತ ನಂದರೆಡ್ಡಿ, ಸಿಂದಗಿ ಸಬ್ ಇನ್ಸ್‌ಪೆಕ್ಟರ್ ರಮೇಶ ರೊಟ್ಟಿ, ಬಾಬಾಸಾಹೇಬಗೌಡ ಪಾಟೀಲ, ಪ್ರೊಬೆಷನರಿ ಸಬ್‌ಇನ್ಸ್‌ಪೆಕ್ಟರ್ ಶಂಕರಪ್ಪ, ಹೆಡ್‌ಕಾನ್‌ಸ್ಟೆಬಲ್‌ಗಳಾದ ಕೆ.ಎಸ್.ಅವರಾದಿ, ಕೆ.ಎ.ಪಟೇಲ್, ಸಿ.ಎಂ.ಪವಾರ, ಎ.ಎಸ್.ನಾಯ್ಕೋಡಿ, ಎ.ಎಸ್.ಹೊಸಮನಿ, ಸಿ.ಎನ್.ಘೋರ್ಪಡೆ, ಎ.ಐ.ರಿಸಾಲ್ದಾರ, ಎಂ.ಜಿ.ಶೇಖ, ಯು.ವೈ.ಪಾಟೀಲ, ಎಸ್.ಎನ್.ಡೊಳ್ಳಿ, ಎನ್.ಬಿ.ಶ್ಯಾಮನ್ನವರ, ಐ.ವೈ.ದಳವಾಯಿ, ಡಿ.ಜೆ.ಕಾಸರ, ಆರ್.ವಿ.ಲಾಳಸಂಗಿ, ವೈ.ಎ.ರಾಠೋಡ, ಕೆ.ಎ.ರಂಗಪ್ಪಗೋಳ, ಎಸ್.ಎಚ್.ರಾಠೋಡ, ಐ.ಎ.ಢವಳಗಿ, ಎ.ಎಲ್, ದೊಡಮನಿ, ಎ.ಎಂ.ನಧಾಪ, ಎನ್.ಎ.ಯಾಳಗಿ, ಆರ್.ಎಚ್.ಕನ್ನೂರ, ವಿ.ಎಂ.ಗಣೇಶನವರ ಈ ನಾಲ್ಕು ತಂಡಗಳಲ್ಲಿದ್ದರು.

ಉತ್ತರ ವಲಯ ಐ.ಜಿ.ಪಿ ಚರಣರೆಡ್ಡಿ ವೇದಿಕೆಯಲ್ಲಿದ್ದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಡಿ.ಸಿ.ರಾಜಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.