ADVERTISEMENT

ಪುತ್ಥಳಿಗಳ ಸ್ವಚ್ಛತಾ ಅಭಿಯಾನ

ವಿವಿಧ ಸಂಘಟನೆಗಳಿಂದ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 6:13 IST
Last Updated 30 ಜನವರಿ 2016, 6:13 IST
ವಿಜಯಪುರ ನಗರದ ಶಿವಾಜಿ ಚೌಕ್‌ನಲ್ಲಿನ ಪುತ್ಥಳಿಯನ್ನು ಶುಕ್ರವಾರ ಸ್ವಚ್ಛಗೊಳಿಸಿದ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು
ವಿಜಯಪುರ ನಗರದ ಶಿವಾಜಿ ಚೌಕ್‌ನಲ್ಲಿನ ಪುತ್ಥಳಿಯನ್ನು ಶುಕ್ರವಾರ ಸ್ವಚ್ಛಗೊಳಿಸಿದ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು   

ವಿಜಯಪುರ: ನಗರದ ವಿವಿಧ ವೃತ್ತಗಳಲ್ಲಿ ಸ್ಥಾಪಿಸಿರುವ ಮಹಾತ್ಮರ ಪುತ್ಥಳಿಗಳನ್ನು ನೆಹರೂ ಯುವ ಕೇಂದ್ರದ ವತಿಯಿಂದ ಶುಕ್ರವಾರ ಸ್ವಚ್ಛಗೊಳಿಸುವ ಅಭಿಯಾನ ನಡೆಸಲಾಯಿತು.

ಮಹಾತ್ಮರ ಪುತ್ಥಳಿ ಸ್ವಚ್ಛತಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ನಗರದ ಶಿವಾಜಿ ವೃತ್ತದಲ್ಲಿರುವ ಶಿವಾಜಿ ಪುತ್ಥಳಿಯನ್ನು ಸ್ವಚ್ಛಗೊಳಿಸುವ ಮೂಲಕ ಚಾಲನೆ ನೀಡಿದರು.

ಅಭಿಯಾನದ ಅಂಗವಾಗಿ ಶಿವಾಜಿ ಪುತ್ಥಳಿ ಸೇರಿದಂತೆ ಮಹಾತ್ಮಗಾಂಧಿ ಪುತ್ಥಳಿ, ಬಸವೇಶ್ವರ ಪುತ್ಥಳಿ, ಅಂಬೇಡ್ಕರ್ ಪುತ್ಥಳಿ, ಟಿಪ್ಪು ಸುಲ್ತಾನ್‌ ಪುತ್ಥಳಿಗಳನ್ನು ಸ್ವಚ್ಛಗೊಳಿಸಲಾಯಿತು.

ಸ್ವಚ್ಛತಾ ಕಾರ್ಯದಲ್ಲಿ ನೆಹರೂ ಯುವ ಕೇಂದ್ರದ ಕಾರ್ಯಕರ್ತರು, ಸಹ್ಯಾದ್ರಿ ಪದವಿ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಘಟಕದ ವಿದ್ಯಾರ್ಥಿಗಳು, ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ಡಿ.ದಯಾನಂದ, ಯುವ ಮುಖಂಡ ಜಾವೀದ ಜಮಾದಾರ, ರಾಣಿ ಚೆನ್ನಮ್ಮ ವಿ.ವಿ.ಯ ಎನ್ಎಸ್ಎಸ್ ಸಮನ್ವಯಾಧಿಕಾರಿ ಡಾ.ಸಜ್ಜಾದೆ, ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕದ ಸಮನ್ವಯಾಧಿಕಾರಿ ಶಕುಂತಲಾ ದೇವಿ, ಸಹ್ಯಾದ್ರಿ ಪದವಿ ಕಾಲೇಜಿನ ಪ್ರಾಚಾರ್ಯ ಬಿ.ಎಸ್.ಬಾಪುಗೌಡ, ಕೆ.ಎಸ್.ಆಲಮೇಲ, ಓ.ಎಸ್.ನಾವಿ, ರುಡ್‌ಸೆಟ್‌ ಸಂಸ್ಥೆ ನಿರ್ದೇಶಕ ಐ.ಜಿ.ನ್ಯಾಮಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.