ADVERTISEMENT

ಬಿಜೆಪಿ ತಂಡದಿಂದ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 9:25 IST
Last Updated 17 ಅಕ್ಟೋಬರ್ 2017, 9:25 IST

ಮುದ್ದೇಬಿಹಾಳ: ಜಿಲ್ಲೆಯ ಆಲಮಟ್ಟಿ ಚಿಮ್ಮಲಗಿ, ಮುಳವಾಡ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಳ ಕಾಲುವೆ ನಿರ್ಮಾಣದಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು ಅಕ್ರಮ ಎಸಗಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಒತ್ತಾಯಿಸಿದರು.

ತಾಲ್ಲೂಕಿನ ಗೋನಾಳ ಬಳಿ ನಿರ್ಮಾಣವಾಗಿರುವ ಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ್ಯಾವ ಯೋಜನೆಗೆ ಎಷ್ಟು ಹಣ ಖರ್ಚಾಗಿದೆ ಎನ್ನುವ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ಯೋಜನೆ ಕಾಲುವೆ ಕಳಪೆಯಾದ ವರದಿ ಸಂಗ್ರಹಿಸಲಾಗುತ್ತಿದೆ.

ಎಲ್ಲರೂ ಸೇರಿ ಸಾವಿರಾರು ಕೋಟಿ ರೂ ಭ್ರಷ್ಟಾಚಾರ ಎಸಗಿರುವುದನ್ನು ಇದೇ 23 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ವಿಜಯಪುರದಲ್ಲಿ ನಡೆಯುವ ಸಮಾವೇಶದಲ್ಲಿ ಬಯಲಿಗೆಳೆಯಲಾಗುದು ಎಂದರು.

ADVERTISEMENT

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಪಾಟೀಲ ಕೂಚಬಾಳ, ರಾಮು ಜಗತಾಪ, ಚನ್ನಪ್ಪ ಗಿಡ್ಡಪ್ಪಗೋಳ, ಬಸವರಾಜ ಕುಂಬಾರ, ಎಂ.ಡಿ.ಕುಂಬಾರ, ಸಂಗನಗೌಡ ಬಿರಾದಾರ, ಸಿದ್ದು ಜೈನಾಪುರ, ಸಿದ್ದು ಹೆಬ್ಬಾಳ, ಬಸವರಾಜ ಗುಳಬಾಳ, ಯಮನಪ್ಪ ತಳವಾರ, ಜಗದೀಶ ಪಂಪಣ್ಣವರ್, ಬಿ.ಜಿ.ಜಗ್ಗಲ್, ಉದಯ್ ರಾಯಚೂರ, ಪಶುರಾಮ್ ಪವಾರ, ಮಲಕೇಂದ್ರಗೌಡ ಪಾಟೀಲ, ರಾಜಶೇಖರ ಹೊಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.