ADVERTISEMENT

ಮೈನವಿರೇಳಿಸಿದ ಪುರವಂತರ ಶಸ್ತ್ರಪ್ರಯೋಗ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 5:10 IST
Last Updated 10 ಏಪ್ರಿಲ್ 2012, 5:10 IST
ಮೈನವಿರೇಳಿಸಿದ ಪುರವಂತರ ಶಸ್ತ್ರಪ್ರಯೋಗ
ಮೈನವಿರೇಳಿಸಿದ ಪುರವಂತರ ಶಸ್ತ್ರಪ್ರಯೋಗ   

ತಾಂಬಾ: ಇಲ್ಲಿಯ ವೀರಭದ್ರೇಶ್ವರ ಜಾತ್ರೆಯು ವೈಶಿಷ್ಟ್ಯಪೂರ್ಣವಾಗಿ ನಡೆಯಿತು. ಪುರವಂತರು ಸಾಹಸ ಮರೆದರು. ಅನಾಮತ್ತು 10ರಿಂದ 15 ಅಡಿ ಉದ್ದನೆಯ ಹಾಗೂ ಒಂದು ಸೆಂಟಿಮೀಟರ್ ದಪ್ಪನೆಯ ಶಸ್ತ್ರವನ್ನು  ಇಬ್ಬರೂ ಸೇರಿ ತಮ್ಮಿಬ್ಬರ ನಾಲಿಗೆಯಲ್ಲಿ ಹಾಯ್ದು ಹೊರ ತೆಗೆಯುವುದನ್ನು ನೋಡಿ ಒಂದು ಕ್ಷಣ  ಆಶ್ಚರ್ಯವನ್ನುಂಟು ಮಾಡಿದರು.

ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪುರವಂತರು ಶಸ್ತ್ರ ಪ್ರಯೋಗ ಮಾಡಿದರು. ಇದು ಹಿಂದಿನಿಂದ ನಡೆದು ಬಂದ ಸಂಸ್ಕೃತಿಯಾಗಿದೆ. ಮುಂಜಾನೆ 5ಕ್ಕೆ ಪುರವಂತರು ಅಗ್ನಿಪ್ರವೇಶ ಮಾಡಿದ ನಂತರ ಭಕ್ತರು ತಾವು ಬೇಡಿಕೊಂಡ ಇಷ್ಟಾರ್ಥಗಳನ್ನು ದೇವರಲ್ಲಿ ಕೇಳಿ ಭಯ ಭಕ್ತಿಯಿಂದ ಅಗ್ನಿ ಪ್ರವೇಶಮಾಡಿದರು.

ಆಳೆತ್ತರದ ಬೆಂಕಿಯಲ್ಲಿ ನಡೆದು ಬರುವುದನ್ನು ನೋಡಿದರೆ ಮೈಜುಂ ಎನ್ನುವಂತಿತ್ತು. ಅಗ್ನಿ ಪ್ರವೇಶ ಮಾಡುವಾಗ ಯಾವುದೇ ತರಹದ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆಯಿಂದ ಜಾತ್ರಾ ಕಮಿಟಿಯವರು 108 ಅಂಬುಲನ್ಸ್‌ನ ವ್ಯವಸ್ಥೆಯನ್ನೂ ಮಾಡಿದ್ದರು.

ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು. ಉತ್ಸವದಲ್ಲಿ  ಗಂಗಾಧರ ಪತ್ತಾರ, ಗಂಗಾಧರ ಕಿಣಗಿ, ಜಕ್ಕಪ್ಪ ಹತ್ತಳ್ಳಿ, ಮಲ್ಲು ಕೆಮಶೇಟಿ, ಶಿವಪುತ್ರಪ್ಪ ಗಂಗನಳ್ಳಿ, ಗುರಲಿಂಗಪ್ಪ ಗೊರನಾಳ, ರಾಚಪ್ಪ ಗಳೇದ, ಮುರಳಿಧರ, ಪತ್ತಾರ, ಈರಣ್ಣ ಚಾಂದಕವಠೆ, ಷಣ್ಮುಖಪ್ಪ ದೇವೂರ, ರೇವಪ್ಪ ಹೊರ್ತಿ, ಸುರೇಶ, ಸರಸಂಬಿ, ಅವಧೂತ ಕುಲಕರ್ಣಿ, ಗುರಲಿಂಗಪ್ಪ ಗೋಡಿಹಾಳ, ಸುಭಾಸ ಅಳಗುಂಡಗಿ  ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.