ADVERTISEMENT

ರೈತರಿಗೆ ಬ್ಯಾಂಕ್ ನೆರವಾಗಲಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 4:30 IST
Last Updated 5 ಜುಲೈ 2012, 4:30 IST

ಆಲಮೇಲ: ಮಾಡಿದ ಸಾಲ ಸದುಪಯೋಗವಾಗಿ ರೈತರ ಆರ್ಥಿಕ ಮತ್ತು ಸಾಮಾಜಿಕ ಬದುಕು ಉತ್ತಮಗೊಂಡರೆ ಉದ್ದೇಶ ಸಾರ್ಥಕವಾಗುತ್ತದೆ ಎಂದು ಗ್ರಾಮದ ಹಿರಿಯರಾದ ಕೇಶವ ಜೋಶಿ ಹೇಳೀದರು.

ಸಮೀಪದ ದೇವಣಗಾಂವ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಮ್ಮಿಕೊಂಡಿದ್ದ ಗ್ರಾಮ ವಿಕಾಸ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಕೋಲಿ ಸಮಾಜದ ರಾಜ್ಯ ಘಟಕದ ಉಪಾಧ್ಯಕ್ಷ ಶರಣಪ್ಪ ಕಣ್ಮೇಶ್ವರ ಮಾತನಾಡಿ ಬ್ಯಾಂಕುಗಳು ಗ್ರಾಹಕರ ಮತ್ತು ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕು ಎಂದರು.

ಬ್ಯಾಂಕಿನ ವ್ಯವಸ್ಥಾಪಕ ಎಸ್.ಎಸ್. ಜಾಗೀರದಾರ ಮಾತನಾಡಿ, ಸಭೆಯ ಉದ್ದೇಶ ಸಾಲದ ಯೋಜನೆಗಳು ಗ್ರಾಹಕರ ಅನುಕೂಲತೆಗಳ ಬಗ್ಗೆ ತಿಳಿಹೇಳಿದರು.

ಗ್ರಾ.ಪಂ. ಅಧ್ಯಕ್ಷೆ ಶಾಂತಾಬಾಯಿ ಹರಗೋಲ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ  ಕಾಶೀನಾಥ ಗಂಗನಳ್ಳಿ, ಗ್ರಾ ಪಂ ಉಪಾಧ್ಯಕ್ಷ ರಾಜೇಂದ್ರ ಕಣ್ಮೇಶ್ವರ, ಗಾ ್ರ.ಪಂ. ಮಾಜಿ ಅಧ್ಯಕ್ಷ ಶಂಕರಲಿಂಗ ಕಡ್ಲೇವಾಡ, ಪ್ರಕಾಶ ಭೂಸನೂರ, ರಮೇಶ ಬುಡ್ಡರ, ಡಾ. ನುರ್ಜಿ ಶೇಖಜಿ, ರಘುವೀರ ಬೀಳಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.