ADVERTISEMENT

ರೌಡಿ ಪ್ರದೀಪ ಬಂಧನ: 3 ನಾಡ ಪಿಸ್ತೂಲ್ ವಶ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 9:10 IST
Last Updated 10 ಜುಲೈ 2013, 9:10 IST

ಆಲಮೇಲ: ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿ ಪ್ರದೀಪ ಸುರೇಶ ಎಂಟಮಾನನನ್ನು ಮಂಗಳವಾರ ಸಮೀಪದ ಕುರಬತಹಳ್ಳಿಯ ಕರಮಸೂತಿ ಹತ್ತಿರ ಬಂಧಿಸಿರುವ ಪೊಲೀಸರು, ಬಂಧಿತನಿಂದ 3 ಕಂಟ್ರಿ ಪಿಸ್ತೂಲ್, 13 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

2008ರಲ್ಲಿ ರಾಮಪೂರ ಹತ್ತಿರ ನಡೆದ ಜೋಡಿ ಕೊಲೆ ಪ್ರಕರಣದ ಮುಖ್ಯ ಆರೋಪಿಯಾಗಿರುವ ಪ್ರದೀಪ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಹಲವು ವಾರೆಂಟ್‌ಗಳು ಇದ್ದರೂ, ಈ ವರೆಗೆ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸ ಮೂಲಗಳು ತಿಳಿಸಿವೆ. ಸ್ಥಳೀಯ ಠಾಣೆಯ ಎಸ್‌ಐ ಗೋಪಾಲ ಹಳ್ಳೂರ, ಪಿಎಸ್‌ಐಗಳಾದ ಮಹಾದೇವ ಯಲಿಗಾರ, ರಾಜಶೇಖರ ಬಡೇದಸಾರ ನೇತೃತ್ವದ ಈ ತಂಡದಲ್ಲಿ ಸಿಬ್ಬಂದಿಯಾದ ಡಿ.ಎಚ್.ಬಾಗೇವಾಡಿ, ಎಸ್.ಎ.ಅಹಿರಸಂಗ, ಎಸ್.ಪಿ. ಕಾಂಬಳೆ, ಜೆ.ಯು.ಚವ್ಹಾಣ, ಜೆ.ಎಸ್.ದೊಡಮನಿ, ಪಿ.ಎಂ.ಟಕ್ಕೋಡ, ಎ.ವೈ.ಸಾಲಿ ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.