ADVERTISEMENT

‘ವಲಸೆ ಬರುವ ಹಾಲುಮತ ಅಭ್ಯರ್ಥಿಗೆ ಬೆಂಬಲ ಇಲ್ಲ’

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 11:53 IST
Last Updated 12 ಅಕ್ಟೋಬರ್ 2017, 11:53 IST
‘ವಲಸೆ ಬರುವ ಹಾಲುಮತ ಅಭ್ಯರ್ಥಿಗೆ ಬೆಂಬಲ ಇಲ್ಲ’
‘ವಲಸೆ ಬರುವ ಹಾಲುಮತ ಅಭ್ಯರ್ಥಿಗೆ ಬೆಂಬಲ ಇಲ್ಲ’   

ಸಿಂದಗಿ: ಮುಂಬರುವ ಸಿಂದಗಿ ವಿಧಾನಸಭಾ ಮತಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಬಯಸುವ ಹಾಲುಮತ ಸಮುದಾಯದ ಯಾವುದೇ ಪಕ್ಷದ ಅಭ್ಯರ್ಥಿ ಅವರು ಇದೇ ಮತಕ್ಷೇತ್ರದವರಾಗಿರಬೇಕು. ಹೊರಗಿನಂದ (ವಲಸೆ) ಬಂದವರಿಗೆ ಆದ್ಯತೆ ಕೊಡುವುದಿಲ್ಲ.

– ಇಲ್ಲಿ ನಡೆದ ತಾಲ್ಲೂಕು ಕುರುಬರ ಸಂಘದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯ ಇದು.

ಸ್ಥಳೀಯ ಹಾಲುಮತ ಅಭ್ಯರ್ಥಿಗೆ ಮಾತ್ರ ಸಂಪೂರ್ಣ ಬೆಂಬಲ. ಹೊರಗಿನಿಂದ ಬಂದು ಕ್ಷೇತ್ರದಲ್ಲಿ ಏನೇನೋ ಗುಲ್ಲು ಎಬ್ಬಿಸುತ್ತಿರುವುದರ ಬಗ್ಗೆ ಹಾಲುಮತ ಸಮುದಾಯದವರು ಕಿವಿಗೊಡಬಾರದು ಎಂದೂ ಸಭೆ ನಿರ್ಣಯಿಸಿತು.

ADVERTISEMENT

ನವೆಂಬರ್‌ ನಲ್ಲಿ ಸಂತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ತಾಲ್ಲೂಕಿನ ಎಲ್ಲ ಸಂಘಟನೆಗಳ ಸಹಕಾರದೊಂದಿಗೆ ವಿಜೃಂಭಣೆಯಿಂದ ಆಚರಿಸಬೇಕು ಎಂದು ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ರಾಜೇಂದ್ರ ಪೂಜಾರಿ ವಹಿಸಿದ್ದರು.

ಪ್ರಮುಖರಾದ ಕಾಡಾ ಸದಸ್ಯ ಬಸಲಿಂಗಪ್ಪ ಗೊಬ್ಬೂರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಕೆ.ಡಿ.ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದು ಬುಳ್ಳಾ, ಎಚ್.ಎಂ.ಯಡಗಿ, ವಿಠೋಬ ಮಾಗಣಗೇರಿ, ಶಿಲ್ಪಾ ಕುದರಗೊಂಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ನಿಂಗಣ್ಣ ಬಿರಾದಾರ, ಪ್ರಕಾಶ ಹಿರೇಕುರುಬರ, ಸಿದ್ದಣ್ಣ ಹಿರೇಕುರುಬರ, ಭೀಮರಾಯ ಅಮರಗೋಳ, ಎಸ್.ಕೆ.ಪೂಜಾರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.