ADVERTISEMENT

ವಿಜಾಪುರದಲ್ಲಿ 29ರಂದು ಬ್ರೇನ್ ಯೋಗ ಶಿಬಿರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 6:57 IST
Last Updated 20 ಡಿಸೆಂಬರ್ 2012, 6:57 IST

ಹುಬ್ಬಳ್ಳಿ: ಕೇವಲ ಶಾರೀರಿಕ ಯೋಗವಲ್ಲದ, ಕಲಿಯುವ ಸಾಮರ್ಥ್ಯವನ್ನು ಹೆಚ್ಚಿಸುವ ಬ್ರೇನ್ ಯೋಗವನ್ನು ಟಿ. ವಿಶ್ವನಾಥ ಕಲಿಸುತ್ತಿದ್ದು, ವಿವಿಧೆಡೆ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ.
ಇದೇ 22ರಂದು ಮಧ್ಯಾಹ್ನ ಎರಡು ಗಂಟೆಗೆ ಹುಬ್ಬಳ್ಳಿಯ ಐ.ಬಿ. ರಸ್ತೆಯ ರೇವಣಕರ ಕಾಂಪ್ಲೆಕ್ಸ್‌ನಲ್ಲಿಯ ಮೂರನೆಯ ಮಹಡಿಯಲ್ಲಿಯ, ಸಿ ಬ್ಲಾಕಿನ ಬಾಬಾ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಏರ್ಪಡಿಸಲಾಗಿದೆ.

23ರಂದು ಬೆಳಗಾವಿಯ ಬಾಂದೂರ ಗಲ್ಲಿಯ ಮರಾಠಿ ಶಾಲೆ ನಂಬರ್ ಏಳರಲ್ಲಿ, 25ರಂದು ಬಾಗಲಕೋಟೆಯ ವಿದ್ಯಾಗಿರಿಯ ಸನ್ಮತಿ ಸಾಂಸ್ಕೃತಿಕ ಭವನದಲ್ಲಿ 29ರಂದು ವಿಜಾಪುರದ ಸ್ಟೇಷನ್ ರಸ್ತೆಯಲ್ಲಿಯ ಸರದೇಶಪಾಂಡೆ ಕಾಲೊನಿಯ ಎಂಟನೇ ಕ್ರಾಸಿನಲ್ಲಿಯ ತುಳಸಿ ಮಹಾ ಶಾಂತಾ ನಿಲಯದಲ್ಲಿ (ನವರತ್ನ ಇಂಟರ್‌ನ್ಯಾಷನಲ್ ಹಿಂದೆ), ಜನವರಿ 14ರಂದು ಹೊಸಪೇಟೆಯಲ್ಲಿ ಸಂಡೂರ ರಸ್ತೆಯಲ್ಲಿಯ ಸಹಾಯಕ ಕಮೀಷನರ್ ಕಚೇರಿ ಪಕ್ಕದ ಸರ್ಕಾರಿ ನೌಕರರ ಭವನದಲ್ಲಿ ಶಿಬಿರಗಳನ್ನು ಆಯೋಜಿ ಸಲಾಗಿದೆ. ಈ ಸ್ಥಳಗಳಲ್ಲಿ ಬೆಳಿಗ್ಗೆ ಒಂಬತ್ತು ಗಂಟೆಗೆ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸುವವರು ಟಿ. ವಿಶ್ವನಾಥ (9845172459)  ಸಂಪರ್ಕಿಸಬಹುದು. 13ರಿಂದ 19ನೇ ವಯಸ್ಸಿನಲ್ಲಿ ಅನೇಕ ವಿದ್ಯಾರ್ಥಿಗಳ ಮನಸ್ಸು ಹುಚ್ಚುಕೋಡಿಯಂತೆ ಇರುತ್ತದೆ. ಇತರರ ಮಾತೆಂದರೆ ಒಂಥರಾ ನಿರ್ಲಕ್ಷ್ಯ. ಒಳ್ಳೆಯದು, ಕೆಟ್ಟದ್ದು ಗೊತ್ತಾಗುವುದಿಲ್ಲ. ವಿಚಾರ ಮಾಡುವ ಮನೋಭಾವನೆ ಹಾಗೂ ತಿಳಿದುಕೊಳ್ಳುವ ವ್ಯವಧಾನವಂತೂ ಮೊದಲೇ ಇರುವುದಿಲ್ಲ.

ADVERTISEMENT

ಜೊತೆಗೆ ಪಾಲಕರ ಅತಿಯಾದ ನಿರೀಕ್ಷೆ, ಹಣಕಾಸಿನ ಸೌಲಭ್ಯ, ಅನವಶ್ಯಕ ನಿರ್ಬಂಧಗಳು, ಶೈಕ್ಷಣಿಕ ಒತ್ತಡ, ಮಾನಸಿಕ ಅಸಮತೋಲನ, ಮನೋಕಾಮನೆಗಳ ಚಿಗುರೊಡೆಯುವಿಕೆ, ವಿವಿಧೆಡೆಯ ಆಕರ್ಷಣೆ ಸರ್ವೇಸಾಮಾನ್ಯ. ಇವೆಲ್ಲದರಿಂದ ಪಾರಾಗಲು ಬ್ರೈನ್ ಯೋಗ ಸಹಕಾರಿ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ರಹದಾರಿ.

ಹಲವಾರು ಯೋಗ ವಿಧಾನಗಳು ಪ್ರಚಲಿತದಲ್ಲಿದ್ದರೂ ಯುವ ಜನಾಂಗವನ್ನು ಆಕರ್ಷಿಸಿರುವುದು ಅಷ್ಟಕ್ಕಷ್ಟೆ. ಹೋಂ ವರ್ಕ್ ಅಥವಾ ಪ್ರಾಜೆಕ್ಟ್‌ಗಳಿಗೆ ಸಮಯವ್ಲ್ಲಿಲ. ಓದುವುದಕ್ಕೆ ಆಗುತ್ತಿಲ್ಲ. ಮನಸ್ಸು ಕೇಳುವುದಿಲ್ಲ. ಶಿಕ್ಷಕರು ಬಿಡುವುದಿಲ್ಲ. ಹೀಗಿದ್ದಾಗ ಯೋಗ ಕಲಿಯುವುದು ಹೇಗೆ? ಇಂಥ ಸಂದಿಗ್ಧದಲ್ಲಿರುವವರು ಯೋಗದಿಂದ ಸರಳ ಪರಿಹಾರ ಹಾಗೂ ಸಮಸ್ಯೆಗೆ ಮುಕ್ತಿ ಪಡೆಯಬಹುದು. ಕೆಲವೇ ನಿಮಿಷದ ಬ್ರೇನ್ ಯೋಗ ನಿಮ್ಮ ಕುಟುಂಬದ ಇಡೀ ಭವಿಷ್ಯವನ್ನೇ ಬದಲಿಸಿಬಿಡಬಹುದು.  ಆರು ವರ್ಷ ಮೇಲ್ಪಟ್ಟ ಯಾವುದೇ ವಯಸ್ಸಿನವರು ಇದನ್ನು ಮಾಡಿ ನಿಶ್ಚಿತ ಲಾಭ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.