ಸಿಂದಗಿ: ಮೂರು ವರ್ಷಕ್ಕೊಮ್ಮೆ ನಡೆಯುವ ತಾಲ್ಲೂಕಿನ ಸುಕ್ಷೇತ್ರ ಕನ್ನೊಳ್ಳಿ ಗ್ರಾಮದ ಲಕ್ಷ್ಮಿ ಭಾಗ್ಯವಂತಿದೇವಿ ಜಾತ್ರಾ ಮಹೋತ್ಸವ ಅತ್ಯಂತ ವೈಭವಪೂರ್ಣವಾಗಿ ಜರುಗಿತು.
ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಥೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಂಥನಾಳ ವಿರಕ್ತಮಠದ ವೃಷಭಲಿಂಗ ಸ್ವಾಮೀಜಿ ಮಾತನಾಡಿ ದೇವರು, ಧರ್ಮ, ನಂಬಿಕೆ ಎನ್ನುವುದು ಕೇವಲ ಗ್ರಾಮಗಳಲ್ಲಿ ಉಳಿದುಕೊಂಡಿದೆ. ಆದರೆ ನಗರಗಳು ಧರ್ಮದಿಂದ ವಿಮುಖವಾಗುತ್ತಿವೆ ಎಂದು ವಿಷಾದಿಸಿದರು.
ಕನ್ನೊಳ್ಳಿ ಶ್ರೀಮಠದ ಮರುಳಾರಾಧ್ಯ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಬಸವಕಲ್ಯಾಣ ತಾಲ್ಲೂಕಿನ ಗಡಿಗೌಡಗಾಂವ ಶ್ರೀಮಠದ ಶಾಂತಲಿಂಗ ಶಿವಾಚಾರ್ಯರು ಸಮ್ಮುಖ ವಹಿಸಿ ಮಾತನಾಡಿದರು. ಜಾತ್ರಾ ಮಹೋತ್ಸವದಲ್ಲಿ ಡೊಳ್ಳಿನ ಕುಣಿತ ವಿಶೇಷವಾಗಿತ್ತು.
ಆರ್.ಎಸ್. ನಾಗಠಾಣ, ಕಂಟೆಪ್ಪ ಕಲ್ಲೂರ, ಗೊಲ್ಲಾಳಪ್ಪ ಚೌಧರಿ, ಶಂಕರ ಬಗಲಿ, ಸಿದ್ದನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಶ್ರೀಕಾಂತವ್ವ ಬಗಲಿ, ಸಿದ್ದಣ್ಣ ಚೌಧರಿ, ಎಸ್.ಕೆ.ಪಾಟೀಲ, ಎಸ್. ಎಂ.ಚೌಧರಿ, ಕಾಸಪ್ಪ ಬಡಿಗೇರ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.