ADVERTISEMENT

ವೈಭವದ ಕುಮಾರ ಶಿವಯೋಗಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 5:25 IST
Last Updated 1 ಮಾರ್ಚ್ 2014, 5:25 IST

ಬಾದಾಮಿ: ಶಿವಯೋಗಮಂದಿರದಲ್ಲಿ ಲಿಂ. ಹಾನಗಲ್‌ ಕುಮಾರ ಶಿವಯೋಗಿಗಳ ರಥೋತ್ಸವವು ಶುಕ್ರವಾರ ಸಹಸ್ರಾರು ಭಕ್ತರ ಸಾಕ್ಷಿಯಾಗಿ ಸಂಭ್ರಮದಿಂದ ಜರುಗಿತು.

ರಥದಲ್ಲಿ ಲಿಂ. ಹಾನಗಲ್‌ ಕುಮಾರ ಶಿವಯೋಗಿಗಳ ಮೂರ್ತಿ­ಯನ್ನು ಪ್ರತಿಷ್ಠಾಪಿಸಲಾಗಿತ್ತು. ರಥವನ್ನು ಪುಷ್ಪ ಮಾಲೆ­ಯಿಂದ ಶೃಂಗರಿಸಲಾಗಿತ್ತು.


ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷ ಸಂಗನಬಸವ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು.ಭಕ್ತರು ರಥವನ್ನು ಎಳೆಯುತ್ತಿದ್ದಂತೆ ಕುಮಾರೇಶ್ವರನಿಗೆ ಜಯವಾಗಲಿ ಎಂದು ಭಕ್ತರ ಘೋಷಣೆ ಮೊಳಗಿದವು. ಭಕ್ತರು ರಥಕ್ಕೆ ಪುಷ್ಪವನ್ನು ಎಸೆದು ಕೃತಾರ್ಥರಾದರು.

ಕೋಡಿಮಠದ ಶಿವಾನಂದ ಶಿವಯೋಗಿರಾಜೇಂದ್ರ ಶ್ರೀಗಳು, ಹುಬ್ಬಳ್ಳಿಯ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಮತ್ತು  ಶಿವಯೋಗ­ಮಂದಿರದಲ್ಲಿ ಅಧ್ಯಯನಗೈದ ವಿವಿಧ ಮಠಾಧೀಶರು, ಮಂದಿರದ ವಟುಗಳು ರಥಕ್ಕೆ ಪೂಜೆಯನ್ನು ಸಲ್ಲಿಸಿದರು.

ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಶಿವಾನಂದ ಕೌಜಲಗಿ ಎಂ.ಬಿ. ಹಂಗರಗಿ, ಮುಕ್ಕಣ್ಣ ಜನಾಲಿ, ಮತ್ತಿತರ ಗಣ್ಯರು ಮತ್ತು ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ರಥೋತ್ಸವ ಮುಗಿದ ನಂತರ ಸುತ್ತಲಿನ ಗ್ರಾಮಗಳ ಭಕ್ತರು ಲಿಂ. ಹಾನಗಲ್‌ ಕುಮಾರ ಶಿವಯೋಗಿಗಳ ಗದ್ದುಗೆಗೆ ಶ್ರದ್ಧೆ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಿದರು.

ರಥೋತ್ಸವಕ್ಕೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಭಾಗವಹಿಸಿ ರಥವನ್ನು ಎಳೆದು ಕೃತರ್ಥರಾದರು. ರಥೋತ್ಸವದ ಉದ್ದಕ್ಕೂ ಭಕ್ತಾದಿಗಳು ಶಿವಯೋಗಿಗಳ ಭಜೆಯಲ್ಲಿ ತೊಡಗಿ ದೇವರನ್ನು ಆರಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT