ADVERTISEMENT

ಶಿಕ್ಷಣಕ್ಕೆ ಗ್ರಾಮೀಣ ಮಹಿಳೆಯರ ಆಸಕ್ತಿ ಕಡಿಮೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 5:20 IST
Last Updated 13 ಫೆಬ್ರುವರಿ 2012, 5:20 IST

ತಾಳಿಕೋಟೆ: `ಗ್ರಾಮೀಣ ಭಾಗದಲ್ಲಿ ಮಹಿಳೆಯರು ಶಿಕ್ಷಣ ಪಡೆಯುವ ಬಗ್ಗೆ ನಿರಾಸಕ್ತಿ ಹೆಚ್ಚಾಗಿರುತ್ತದೆ~ ಎಂದು ಸಿ.ಆರ್.ಪಿ. ರಾಜು ವಿಜಾಪುರ ವಿಷಾದಿಸಿದರು

ಅವರು ಸಮೀಪದ ಗುಂಡಕನಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ  ಎನ್.ಪಿ.ಜಿ.ಇ.ಎಲ್ ಯೋಜನೆಯಡಿ ಆಯೋಜಿಸಲಾಗಿದ್ದ  `ಮೀನಾ~ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಣ್ಣುಮಕ್ಕಳು ದೊಡ್ಡವರಾಗುತ್ತಿದ್ದಂತೆ ಶಾಲೆ ಬಿಡಿಸುವುದು, ಮನೆಯಲ್ಲಿ ಮಕ್ಕಳನ್ನು ಆಡಿಸಲು, ಮನೆಗೆಲಸಕ್ಕೆ ಬಳಕೆ ಮಾಡಿ ಮಹಿಳೆಯರನ್ನು ಶಿಕ್ಷಣದಿಂದ ವಂಚಿತರಾಗಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸರ್ಕಾರದಿಂದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅನೇಕ ಸೌಲಭ್ಯಗಳಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣ ಪಡೆಯಬೇಕು ಎಂದರು. ಇನೊಬ್ಬ ಅತಿಥಿ  ಬಂಡೆಪ್ಪನ ಸಾಲವಾಡಗಿ ಮುಖ್ಯಶಿಕ್ಷಕ ಪಿ.ಎ. ಮುಲ್ಲಾ ಮಾತನಾಡಿ,  ಮಹಿಳೆಯರು ಶಿಕ್ಷಣ ಪಡೆದರೆ ಸಮಾಜದ ಪರಿಪೂರ್ಣ ಅಭಿವೃದ್ಧಿಯಾಗುತ್ತದೆ ಎಂದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮನಗೌಡ ವಂದಗನೂರ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯಲ್ಲಿ ಮುಖ್ಯಶಿಕ್ಷಕಿ ಆರ್.ಬಿ. ಆಲೂರ, ಜಿ.ಕೆ. ಪತ್ತಾರ, ಎಸ್.ಕೆ. ಮೂಡಗಿ, ಎಸ್.ಸಿ. ತಿಳಗೂಳ ಉಪಸ್ಥಿತರಿದ್ದರು.

ಬಿ.ಎಂ. ಟಪಾಲ ಸ್ವಾಗತಿಸಿದರು. ಎಂ.ಎಸ್. ಬಿಜಾಪುರ ನಿರೂಪಿಸಿದರು. ಆರ್.ಡಿ. ರಾಠೋಡ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.