ADVERTISEMENT

ಸೈಕ್ಲಿಂಗ್ ವೆಲ್ಲೊಡ್ರೋಮ್‌ಗೆ 2 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 9:20 IST
Last Updated 11 ಅಕ್ಟೋಬರ್ 2012, 9:20 IST

ವಿಜಾಪುರ: ವಿಜಾಪುರ ನಗರದಲ್ಲಿ ಸೈಕ್ಲಿಂಗ್ ವೆಲ್ಲೊಡ್ರೋಮ್ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ  2 ಕೋಟಿಗೆ ರೂಪಾಯಿಗೆ ಸರ್ಕಾರ ಮಂಜೂರಾತಿ ನೀಡಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರಿನಿವಾಸ್ ತಿಳಿಸಿದ್ದಾರೆ.

ವಿಜಾಪುರದಲ್ಲಿ ಸೈಕ್ಲಿಂಗ್ ವೆಲ್ಲೊಡ್ರೋಮ್ ನಿರ್ಮಿಸುವ  4.23 ಕೋಟಿ ರೂಪಾಯಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಈ ಮೊತ್ತದ ಪೈಕಿ ಮೊದಲನೇ ಕಂತಾಗಿ  2 ಕೋಟಿ ರೂಪಾಯಿಗೆ  ಸರ್ಕಾರ ಮಂಜೂರಾತಿ ನೀಡಿದೆ ಎಂದು ಅವರು ಹೇಳಿದ್ದಾರೆ.

ನಗರದ ಸೈಕ್ಲಿಂಗ್ ವೆಲ್ಲೊಡ್ರೋಮ್‌ಗೆ ಹಣ ಮಂಜೂರು ಮಾಡಿಸಿದ ಸಚಿವ ಅಪ್ಪಚ್ಚು ರಂಜನ್ ಅವರಿಗೆ ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ರಾಜು ಬಿರಾದಾರ ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.