ADVERTISEMENT

'ಸ್ವಚ್ಛತೆ ಕಾಯ್ದುಕೊಂಡು ಆರೋಗ್ಯವಾಗಿರಿ'

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 9:22 IST
Last Updated 14 ಅಕ್ಟೋಬರ್ 2017, 9:22 IST

ಹೊರ್ತಿ: ಉತ್ತಮ ಆರೋಗ್ಯಕ್ಕಾಗಿ ವಾಸಿಸುವ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದು ಅವಶ್ಯ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹೇಶ ದೈವಾಡಿ ಹೇಳಿದರು. ಸಮೀಪದ ಇಂಚಗೇರಿ ಗ್ರಾಮದಲ್ಲಿ ಬಿ.ಎಲ್‌ಡಿ.ಇ ಸಂಸ್ಥೆಯ ಬಿ.ಎಂ.ಪಾಟೀಲ ಇನ್ಸ್‌ಟ್ಯೂಟ್ ಆಫ್ ನರ್ಸಿಂಗ್‌ ಕಾಲೇಜ, ಸ್ಥಳೀಯ ಗ್ರಾಮ ಪಂಚಾಯ್ತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವುಗಳು ವಾಸಿಸುವ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಇಲ್ಲದಿದ್ದರೇ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಹೀಗಾಗಿ ಸ್ವಚ್ಛತೆ ಕುರಿತು ಜಾಗೃತರಾಗ ಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭಾರತಿ ಚವ್ಹಾಣ, ಸದಸ್ಯ ಬಸವರಾಜ ಏಳಗಿ, ಕಾಶೀನಾಥ ಕನಮಡಿ, ಚಂದ್ರಕಾಂತ ಬೆಳ್ಳೆನವರ, ಮಲ್ಲು ಚನಶೆಟ್ಟಿ, ಮಲಕಾರಿ ನರಳೆ, ಗಿರಮಲ್ಲ ಹರಿಜನ, ಪರಮೇಶ್ವರ ಬೆಳ್ಳೆನವರ, ರಮೇಶ ಕಾಂಬಳೆ, ಸಂಗಪ್ಪ ಬೆಳ್ಳೆನವರ, ಪ್ರವೀಣ ಬೆಳ್ಳೆನವರ, ಬಸವರಾಜ ಬೆಳ್ಳೆನವರ, ರವಿ ಬೂದಿಹಾಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT