ADVERTISEMENT

ಹಾವಿನಾಳ: ರಂಗ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 6:00 IST
Last Updated 21 ಫೆಬ್ರುವರಿ 2012, 6:00 IST

ಚಡಚಣ: ಸಮೀಪದ ಹಾವಿನಾಳ ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಜಿ.ಪಂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಜಿ.ಪಂ. ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಸೋಮವಾರ ಭೂಮಿ ಪೂಜೆ  ನೆರವೇರಿಸಿದರು.

ನಂತರ ಮಾತನಾಡಿದ ಅವರು, ಸರ್ಕಾರ ದಲಿತರಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅದರ ಸದುಪಯೋಗಪಡೆದುಕೊಳ್ಳಿ. ಗ್ರಾಮದಲ್ಲಿರುವ ಪ್ರಾರ್ಥನಾ ಮಂದಿರದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ತಮ್ಮ ಅನುದಾನದಲ್ಲಿ ಹಣ ಒದಗಿಸುವುದಾಗಿ ಭರವಸೆ ನೀಡಿದರು.

ಕಿರಿಯ ಎಂಜನಿಯರ್ ಎಸ್.ಬಿ. ಬಾಣಿ, ಜಿಲ್ಲಾ ಪಂಚಾಯಿತಿಯ 13ನೇ ಹಣಕಾಸು ಯೋಜನೆಯಲ್ಲಿ ನಿರ್ಮಾಣಗೊಳ್ಳಲಿರುವ ಈ ರಂಗ ಮಂದಿರದ ಅಂದಾಜು ವೆಚ್ಚ ರೂ. 2.60 ಲಕ್ಷ. ಇದರಂತೆ ರೇವತಗಾಂವ ಗ್ರಾಮದಲ್ಲಿಯೂ ಬಯಲು ರಂಗ ಮಂದಿರದ ಕಾಮಗಾರಿ ಆರಂಭಿಸಲಾಗುವುದು ಎಂದರು.

ಮುಖಂಡ ರಮೇಶ ಬನಸೋಡೆ ಮಾತನಾಡಿ, ಅಂಬೇಡ್ಕರ್ ಕಾಲೊನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಉತ್ತಮ ರಸ್ತೆಗಳು ನಿರ್ಮಾಣವಾಗಿಲ್ಲ. ಕೂಡಲೇ  ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಮುಖಂಡರಾದ ಅಪ್ಪುಗೌಡ ಪಾಟೀಲ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕಲ್ಲಪ್ಪ ಉಟಗಿ, ತಾ.ಪಂ. ಸದಸ್ಯ ಅಶೋಕ ನಡಗಟ್ಟಿ, ವಿಲಾಸ ಕಾಂಬಳೆ,  ಸಂಜೀವ ಬನಸೋಡೆ, ಪೀರಪ್ಪ ಧಾಬೆ,ಯಶವಂತ ಕನ್ನೂರು, ಸುಖದೇವ ಬನಸೋಡೆ, ಕಲ್ಲಪ್ಪ ಉಟಗಿ, ಶ್ರಿಧರ ಕಾಂಬಳೆ, ಚಂದ್ರಶೇಖರ ಬನಸೋಡೆ, ಶ್ರೀಶೈಲ ಅಂಜುಟಗಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT