ADVERTISEMENT

167 ಜನ ಕಾರ್ಮಿಕರಿಂದ ರಕ್ತದಾನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 8:40 IST
Last Updated 26 ಫೆಬ್ರುವರಿ 2012, 8:40 IST

ಚಡಚಣ: ಸಮೀಪದ ಹಾವಿನಾಳದ ಇಂಡಿಯನ್ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಣಜೀತಸಿಂಹ (ಭಯ್ಯಾಸಾಹೇಬ)  ಶಿಂಧೆ ಅವರ 33ನೇ ಜನ್ಮ ದಿನದ ನಿಮಿತ್ತ ಶುಕ್ರವಾರ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ 167 ಜನ ಕಾರ್ಮಿಕರು ರಕ್ತದಾನ ಮಾಡಿ, ತಮ್ಮ ಯಜಮಾನ ನೂರು ವರ್ಷ ಬಾಳಲೆಂದು ಶುಭ ಕೋರಿದರು.

ಬೆಳಿಗ್ಗೆ ಕಾರ್ಖಾನೆಯ ಆವರಣದಲ್ಲಿ ನೆರೆದ ಸಾವಿರಾರು ಕಾರ್ಮಿಕರು ಹಾಗೂ ರೈತರ ಮೋಗದಲ್ಲಿ ಎಲ್ಲಿಲ್ಲದ ಸಂತಸ ಎದ್ದು ಕಾಣುತ್ತಿತ್ತು. ಫಲ ಪುಷ್ಪಗಳನ್ನು ಹೊತ್ತ ಸಾವಿರಾರು ಅಭಿಮಾನಿಗಳು ಒಡೆಯನಿಗೆ ಶುಭ ಕೋರಿದರು. ನಂತರ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಕಾರ್ಖಾನೆಯ ಅಧ್ಯಕ್ಷ ರಣಜೀತಸಿಂಹ (ಭಯ್ಯಾಸಾಹೇಬ) ಶಿಂಧೆ, ಕಾರ್ಮಿಕರು ಹಾಗೂ ರೈತರು ಅವರಿಬ್ಬರು ಚೆನ್ನಾಗಿದ್ದರೆ ಅದು ನನ್ನ ಹಿತ, ಕಾರ್ಮಿಕರು, ರೈತರು, ಅಭಿಮಾನಿಗಳು ನನ್ನ ಮೇಲಿಟ್ಟ ಪ್ರೀತಿ, ವಿಶ್ವಾಸಗಳಿಗೆ ನಾನು ಚಿರಋಣಿಯಾಗಿರುವುದಾಗಿ ತಿಳಿಸಿದರು.

ನಂತರ ಕಾರ್ಖಾನೆಯ ಆವರಣದಲ್ಲಿ ನಿರ್ಮಿಸಲಾಗಿದ್ದ ವಿಶಾಲವಾದ ಶಾಮೀಯಾನದಲ್ಲಿ ಕಾರ್ಖಾನೆಯ ಸಂಚಾಲಕ ಡಾ.ವಿ.ಎಸ್. ಪತ್ತಾರ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿದರು.
ಸ್ವಯಂ ಪ್ರೇರಿತರಾದ 167 ಜನ ಕಾರ್ಮಿಕರು ಈ ಸಂದರ್ಭದಲ್ಲಿ ರಕ್ತದಾನ ಮಾಡಿದರು. ಈ ರಕ್ತದಾನದ ನೇತೃತ್ವವನ್ನು ಅಕ್ಷಯ ಬ್ಲಡ್ ಬ್ಯಾಂಕ್‌ನ ಆಯೋಜಕ ಉದಯ ಪಾಟೀಲ ವಹಿಸಿದ್ದರು.

ಕಾರ್ಖಾನೆಯ ಜನರಲ್ ಮ್ಯಾನೇಜರ್ ರಣಜೀತ ಶರದ ಬೊರವಕೆ, ಆಡಳಿತಾಧಿಕಾರಿ ರಮಾಕಾಂತ ಪಾಟೀಲ, ಟೆಕಾಳೆ ಡಿ.ಕೆ. ಕ್ಷೀರಸಾಗರ ಪಿ.ಟಿ. ಭೋಸಲೆ, ಆರ್.ಡಿ. ಚೌಧರಿ, ಎ.ಬಿ. ನಲವಡೆ, ಡಿ.ಎನ್. ಝಗಡೆ  ಎಸ್.ಸಿ. ವಾಘದರಿ, ಎಸ್.ಝಡ್. ಗಿರಾಮ, ಎಸ್.ಎ. ಪಾಟೀಲ, ಬಿ.ಎಸ್. ದೇವಕತೆ, ಬಿ.ಬಿ. ಭಂಡಾರೆ, ಎಂ.ಎಂ. ಲಟಕೆ, ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.