ADVERTISEMENT

ಆಲಮಟ್ಟಿಯಲ್ಲಿ ಮನೆ ಬಾಗಿಲು ಒಡೆದು 250 ಗ್ರಾಂ ಚಿನ್ನ ಕಳ್ಳತನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 4:41 IST
Last Updated 13 ಜನವರಿ 2026, 4:41 IST
ಆಲಮಟ್ಟಿ ಗ್ರಾಮದಲ್ಲಿ ಕಳ್ಳತನವಾದ ಮನೆ ಬಳಿ ಸೇರಿದ್ದ ಜನರನ್ನುದ್ದೇಶಿಸಿ ಬಸವನಬಾಗೇವಾಡಿ ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಶರಣಗೌಡ ಗೌಡರ ಘಟನೆಯ ಕುರಿತು ಚರ್ಚಿಸಿದರು
ಆಲಮಟ್ಟಿ ಗ್ರಾಮದಲ್ಲಿ ಕಳ್ಳತನವಾದ ಮನೆ ಬಳಿ ಸೇರಿದ್ದ ಜನರನ್ನುದ್ದೇಶಿಸಿ ಬಸವನಬಾಗೇವಾಡಿ ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಶರಣಗೌಡ ಗೌಡರ ಘಟನೆಯ ಕುರಿತು ಚರ್ಚಿಸಿದರು   

ಆಲಮಟ್ಟಿ: ಮನೆಯ ಕೀಲಿ, ಬಾಗಿಲಿನ ಕೊಂಡಿ ಮುರಿದು 25 ತೊಲಕ್ಕೂ ಅಧಿಕ ಚಿನ್ನ (250 ಗ್ರಾಂ), ನಗದು ಕಳ್ಳತನ ಮಾಡಿದ ಘಟನೆ ಆಲಮಟ್ಟಿ ರೇಲ್ವೆ ಸ್ಟೇಷನ್ ಹತ್ತಿರದ ಮನೆಯಲ್ಲಿ ಭಾನುವಾರ ಹಾಡು ಹಗಲೇ ಜರುಗಿದೆ.

ಆಲಮಟ್ಟಿ ಆರ್.ಎಸ್ ನಿವಾಸಿ ಶರಣಪ್ಪ ಕೊಲ್ಹಾರ ಮನೆಯಲ್ಲಿ ಕಳ್ಳತನ ಆಗಿದೆ.  ಶರಣಪ್ಪ ಅವರ ಪತ್ನಿ, ಖಾಸಗಿ ಶಾಲಾ ಶಿಕ್ಷಕಿ ಗುರುಬಾಯಿ ಬಾದಾಮಿ ಬನಶಂಕರಿ ಜಾತ್ರೆಗೆ ತೆರಳಿದ್ದಾರೆ. ಶರಣಪ್ಪ ಸ್ವಂತ ಗ್ರಾಮ ಹಿರೇಗುಳಬಾಳಕ್ಕೆ ತೆರಳಿದ್ದಾರೆ. ಮಧ್ಯಾಹ್ನ 3 ಕ್ಕೆ ಪತ್ನಿ ಗುರುಬಾಯಿ ಬಾದಾಮಿ ಜಾತ್ರೆಯಿಂದ ಆಲಮಟ್ಟಿಗೆ ವಾಪಸ್ಸಾದಾಗ ಮನೆಯ ಬೀಗ, ಕೀಲಿಕೊಂಡಿ ಮುರಿದದ್ದು ಕಂಡಿದೆ. ಮನೆಯೊಳಗಿನ ಮಂಚದ ಕೆಳಗಡೆ ಇಟ್ಟಿದ್ದ ಸೂಟ್‌ಕೇಸ್‌ನ ಲಾಕ್ ಮುರಿದಿದ್ದು ಗೊತ್ತಾಗಿದೆ.

ಅದರೊಳಗೆ ಇಟ್ಟಿದ್ದ 258 ಗ್ರಾಂ ಚಿನ್ನದ ಆಭರಣಗಳನ್ನು ಹಾಗೂ 15 ಸಾವಿರ ರೂಪಾಯಿ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ಈ ಕುರಿತು ಗುರುಬಾಯಿ ಕೊಲಾರ ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.

ADVERTISEMENT

ಒಟ್ಟಾರೆ 25, 80,000 ರೂಪಾಯಿ ಮೌಲ್ಯದ 258 ಗ್ರಾಂ ಚಿನ್ನ ಹಾಗೂ 15,000 ರೂ ನಗದು ಕಳ್ಳತನ ಭಾನುವಾರ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 3 ಗಂಟೆ ಮಧ್ಯೆ ಜರುಗಿದೆ ಎಂದು ನಿಡಗುಂದಿ ಸಿಪಿಐ ಶರಣಗೌಡ ಗೌಡರ ತಿಳಿಸಿದರು. ಸ್ಥಳಕ್ಕೆ ಬಸವನಬಾಗೇವಾಡಿ ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ ಭೇಟಿ ನೀಡಿ ಪರಿಶೀಲಿಸಿದರು.
ಬೆರಳಚ್ಚು ತಜ್ಞರು, ಶ್ವಾನ ದಳದ ತಂಡ ಭೇಟಿ ನೀಡಿತ್ತು.

ಸ್ಥಳಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿದ ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಶರಣಗೌಡ ಗೌಡರ ಪರಿಶೀಲನೆ ನಡೆಸಿ, ಗ್ರಾಮಸ್ಥರಿಗೆ ಅರಿವು ಮೂಡಿಸಿದರು. ಪ್ರಕರಣವನ್ನು ಪತ್ತೆ ಹಚ್ಚಲು ನಿಡಗುಂದಿ ಸಿಪಿಐ ನೇತೃತ್ವದಲ್ಲಿ ಎರಡು ತಂಡ ರಚಿಸಿದ್ದು ಶೀಘ್ರವೇ ಕಳ್ಳರನ್ನು ಬಂಧಿಸುವುದಾಗಿ ಡಿವೈಡಿವೈಎಸ್ ಪಿ ಬಲ್ಲಪ್ಪ ನಂದಗಾವಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿ ಮನೆಯವರು, ತಮ್ಮ ತಮ್ಮ ಮನೆಯ ಹೊರಬಾಜು ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಸೂಚಿಸಿದರು. ಗ್ರಾಮ ಪಂಚಾಯ್ತಿ ವತಿಯಿಂದಲೂ ಮುಖ್ಯ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದರು.

ಆಲಮಟ್ಟಿ ಗ್ರಾಮದಲ್ಲಿ ಕಳ್ಳತನವಾದ ಮನೆಗೆ ಬಸವನಬಾಗೇವಾಡಿ ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ ಭೇಟಿ ನೀಡಿ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.