ADVERTISEMENT

`80 ಸಾವಿರ ಎಕರೆಗೆ ನೀರಾವರಿ ಸೌಲಭ್ಯ'

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 5:34 IST
Last Updated 3 ಜುಲೈ 2013, 5:34 IST

ವಿಜಾಪುರ: ಬಬಲೇಶ್ವರ ಏತ ನೀರಾವರಿ ಯೋಜನೆಯನ್ನು ಹನಿ ನೀರಾವರಿ ಪದ್ಧತಿಯ ಮೂಲಕ ಅನುಷ್ಠಾನಗೊಳಿಸಿ, 80ಸಾವಿರ ಎಕರೆ ಪ್ರದೇಶಕ್ಕೆ ನೀರು ಒದಗಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು.

ತಾಲ್ಲೂಕಿನ ಇಟ್ಟಂಗಿಹಾಳ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ನೂತನ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಹನಿ ನೀರಾವರಿ ವೆಚ್ಚದಾಯಕ ಎಂದು ರೈತರು ಗಾಬರಿಯಾಗುವ ಅಗತ್ಯವಿಲ್ಲ. ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಿ ಈ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಇದು ಕರ್ನಾಟಕದ ನೀರಾವರಿ ನಕ್ಷೆಯಲ್ಲಿ ಹೊಸ ಪ್ರಯೋಗವಾಗಲಿದೆ ಎಂದರು.

ಡಿ.ಡಿ.ಪಿ.ಐ ಎಸ್.ವೈ. ಹಳಿಂಗಳಿ, ನಾಗು ತಂಗಡಿ, ಪ್ರಕಾಶ ಹಟ್ಟಿ, ಚಂದು ಜಂಬಗಿ, ರಮೇಶ ಹಟ್ಟಿ, ಸಿದ್ದು ಗುಲಗಂಜಿ, ಸೋಪಾನ ಕರಾತ, ಶೇಖು ಕಾರಜೋಳ, ಕಾಶೀನಾಥ ರಾಠೋಡ, ಮಾದು ಪೂಜಾರಿ, ರವಿ ತಂಗಡಿ, ತುಕಾರಾಮ ರಾಠೋಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.