ADVERTISEMENT

ದೇವರಹಿಪ್ಪರಗಿ: ಸಾರಿಗೆ ನಿಯಂತ್ರಕರಿಲ್ಲದ ಬಸ್ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 6 ಮೇ 2024, 16:15 IST
Last Updated 6 ಮೇ 2024, 16:15 IST
ದೇವರಹಿಪ್ಪರಗಿ ಬಸ್ ನಿಲ್ದಾಣದಲ್ಲಿ ಸಾರಿಗೆ ನಿಯಂತ್ರಕರಿಲ್ಲದೇ ಬಿಕೋ ಎನ್ನುತ್ತಿರುವ ಕೊಠಡಿಯ ಮುಂದೆ ತಮ್ಮ ಗ್ರಾಮದ ಬಸ್ಸಿನ ಮಾಹಿತಿ ತಿಳಿಯಲು ನಿಂತ ಪ್ರಯಾಣಿಕರು
ದೇವರಹಿಪ್ಪರಗಿ ಬಸ್ ನಿಲ್ದಾಣದಲ್ಲಿ ಸಾರಿಗೆ ನಿಯಂತ್ರಕರಿಲ್ಲದೇ ಬಿಕೋ ಎನ್ನುತ್ತಿರುವ ಕೊಠಡಿಯ ಮುಂದೆ ತಮ್ಮ ಗ್ರಾಮದ ಬಸ್ಸಿನ ಮಾಹಿತಿ ತಿಳಿಯಲು ನಿಂತ ಪ್ರಯಾಣಿಕರು   

ದೇವರಹಿಪ್ಪರಗಿ: ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣದಲ್ಲಿ ಸಾರಿಗೆ ನಿಯಂತ್ರಕರಿಲ್ಲದೇ ಕೊಠಡಿ ಬಿಕೋ ಎನ್ನುವಂತಿದ್ದು, ವಿವಿಧೆಡೆ ತೆರಳುವ ಬಸ್‌ಗಳ ಮಾಹಿತಿ ತಿಳಿಯಲು ಪ್ರಯಾಣಿಕರು ಪರದಾಡುವಂತಾಗಿದೆ.

ಪಟ್ಟಣ ಹಾಗೂ ತಾಲ್ಲೂಕು ಕೇಂದ್ರ ಸ್ಥಳದ ಬಸ್ ನಿಲ್ದಾಣ ನೂತನವಾಗಿ ನಿರ್ಮಾಣಗೊಂಡು ಕಂಗೊಳಿಸುತ್ತಿದೆ. ಆದರೆ ಅಗತ್ಯ ಸಿಬ್ಬಂದಿಯಿಲ್ಲದೆ ಭಣಗುಡುತ್ತಿದೆ. ಮುಖ್ಯವಾಗಿ ಬಸ್ ನಿಲ್ದಾಣದಲ್ಲಿ ಕಳೆದ ಎರಡು ದಿನಗಳಿಂದ ಸಾರಿಗೆ ನಿಯಂತ್ರಕರು ಇಲ್ಲದೆ ಕೊಠಡಿಯನ್ನು ಮುಚ್ಚಲಾಗಿದೆ. ಬಸ್‌ಗಳ ಮಾಹಿತಿ ತಿಳಿಯಲು ಪ್ರಯಾಣಿಕರು ಪರದಾಡಿ ಇತರರನ್ನು ಕೇಳುವಂತಾಗಿದೆ.

ಸ್ಥಳೀಯ ಬಸ್ ನಿಲ್ದಾಣಕ್ಕೆ ಕನಿಷ್ಠ ಇಬ್ಬರು ಸಾರಿಗೆ ನಿಯಂತ್ರಕರ ಅಗತ್ಯವಿದೆ. ಆದರೆ ಇಲ್ಲಿ ಕೇವಲ ಒಬ್ಬರು ಕಾರ್ಯನಿರ್ವಹಿಸುತ್ತಿದ್ದು ಅವರೂ ಕೆಲಸದ ಒತ್ತಡ ಹಾಗೂ ವೈಯಕ್ತಿಕ ಕಾರಣಗಳಿಗಾಗಿ ರಜೆ ಪಡೆದಿದ್ದು, ಪ್ರಯಾಣಿಕರಿಗೆ ಮಾಹಿತಿದಾರರು ಇಲ್ಲದಂತಾಗಿದೆ. ಬಸ್ ನಿಲ್ದಾಣದ ಕ್ಷೇತ್ರ ಹಾಗೂ ಕಾರ್ಯಕ್ಕೆ ಅನುಗುಣವಾಗಿ ಪ್ರಸ್ತುತ ಇಬ್ಬರು ಸಾರಿಗೆ ನಿಯಂತ್ರಕರು ಹಾಗೂ ಒಬ್ಬರು ಭದ್ರತಾ ಸಿಬ್ಬಂದಿಯ ಅಗತ್ಯವಿದ್ದು ಕೂಡಲೇ ನೇಮಿಸಿ ಅನುಕೂಲ ಕಲ್ಪಿಸಬೇಕು ಎಂಬುದು ಪ್ರಯಾಣಿಕರ ಆಗ್ರಹ.

ADVERTISEMENT

ತಾಲ್ಲೂಕು ಕೇಂದ್ರದ ಬಸ್ ನಿಲ್ದಾಣಕ್ಕೆ ಸಿಬ್ಬಂದಿ, ಅದರಲ್ಲೂ ಮುಖ್ಯವಾಗಿ ನಿಯಂತ್ರಕರು ಇದ್ದರೆ ನಮ್ಮಂಥ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಕೋರವಾರ ಗ್ರಾಮದ ಮಂಜುನಾಥ ಕಾಮನಕೇರಿ, ರಾಯಗೊಂಡ ಯರನಾಳ (ಯಂಭತ್ನಾಳ), ಲಕ್ಷ್ಮೀ ಸಜ್ಜನ(ದೇವೂರ), ಎಂ.ಜಿ.ಹಿರೇಮಠ(ಕರಭಂಟನಾಳ),ಚನ್ನಪ್ಪ ಕಾರಜೋಳ (ನಿವಾಳಖೇಡ) ಹಾಗೂ ಪ್ರಕಾಶ ಡೋಣೂರಮಠ (ಸಾತಿಹಾಳ) ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.