ADVERTISEMENT

ಶ್ರೇಷ್ಠ ಅನುಭಾವ ಸಾಹಿತಿ ಮಧುರ ಚೆನ್ನ: ಎಂ.ಎಸ್.ಮದಭಾವಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 5:59 IST
Last Updated 7 ನವೆಂಬರ್ 2025, 5:59 IST
   

ವಿಜಯಪುರ: ದೇಶದ ಶ್ರೇಷ್ಠ ಅನುಭಾವ ಸಾಹಿತ್ಯದ ಕೃತಿಯಲ್ಲಿ ಮಧುರ ಚೆನ್ನರು ರಚಿಸಿದ ‘ನನ್ನ ನಲ್ಲ’ವೂ ಒಂದಾಗಿದೆ. ಹಲಸಂಗಿ ಗೆಳೆಯರ ಪ್ರತಿಷ್ಠಾನ ಕಟ್ಟಿ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಹೊರತಂದ ಕೀರ್ತಿ ಮಧುರ ಚೆನ್ನರಿಗೆ ಸಲ್ಲುತ್ತದೆ ಎಂದು ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎಂ.ಎಸ್.ಮದಭಾವಿ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟದ ಭರವಸೆ ಕೋಶ ಹಾಗೂ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಜರುಗಿದ ಮಧುರ ಚೆನ್ನರ ‘ನನ್ನ ನಲ್ಲ’ ಕವನಸಂಕಲನ ಅವಲೋಕನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

‘ಮಧುರ ಚೆನ್ನರು ಅರವತ್ತು ನೀಳಕವಿತೆಗಳ ಸಂಗ್ರಹ ‘ನನ್ನ ನಲ್ಲ’ ಸಖ್ಯ ಯೋಗವನ್ನು ರಾಜ್ಯಕ್ಕೆ ಪರಿಚಯಿಸಿತು. ಕೇವಲ 50 ವಸಂತಗಳ ಕಾಲ ಬದುಕಿದ ಕವಿ ಮಧುರ ಚೆನ್ನರ ಅಪ್ಪಟ ಗ್ರಾಮೀಣ ಪ್ರತಿಭೆ’ ಎಂದರು.

ADVERTISEMENT

ಹಿರಿಯ ಪ್ರಾದ್ಯಾಪಕ ಡಾ. ಎಸ್.ಎಸ್.ರಾಜಮಾನೆ ಮಾತನಾಡಿ, ‘ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಹಲಸಂಗಿ ಗೆಳೆಯರ ಪಾತ್ರ ದೊಡ್ಡದು ಮತ್ತು ಮಧುರ ಚೆನ್ನರು ಈ ನಾಡ ಕಂಡ ಶ್ರೇಷ್ಠ ಅನುಭಾವ ಸಾಹಿತಿ’ ಎಂದು ಹೇಳಿದರು.

ಕನ್ನಡ ವಿಭಾಗದ ಮುಖ್ಯಸ್ಥೆ ಲಕ್ಷ್ಮಿ ಮೋರೆ, ಸವಿತಾ ಚವ್ಹಾಣ, ಬೋರಮ್ಮ ಗಂಜಾಳ, ನಾತುರಾಮ ಜಾಧವ ಸೇರಿದಂತೆ ಬೋಧಕ ಮತ್ತು ಬೋಧಕತೇರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.