ADVERTISEMENT

ಕೋವಿಡ್‌ ಚಿಕಿತ್ಸೆಗೆ ಪ್ಲಾಸ್ಮಾ ದಾನ ಮಾಡಿದ ವಕೀಲ

​ಪ್ರಜಾವಾಣಿ ವಾರ್ತೆ
Published 8 ಮೇ 2021, 12:41 IST
Last Updated 8 ಮೇ 2021, 12:41 IST
ವಿಜಯಪುರದ ಶ್ರೀ ಸಿದ್ದೇಶ್ವರ ಪ್ರಯೋಗಾಲಯಲ್ಲಿ ವಕೀಲ ಆಸೀಫುಲ್ಲಾ ಖಾದ್ರಿ ತಮ್ಮ ರಕ್ತದ ಪ್ಲಾಸ್ಮಾವನ್ನು ದಾನ ಮಾಡಿದರು
ವಿಜಯಪುರದ ಶ್ರೀ ಸಿದ್ದೇಶ್ವರ ಪ್ರಯೋಗಾಲಯಲ್ಲಿ ವಕೀಲ ಆಸೀಫುಲ್ಲಾ ಖಾದ್ರಿ ತಮ್ಮ ರಕ್ತದ ಪ್ಲಾಸ್ಮಾವನ್ನು ದಾನ ಮಾಡಿದರು   

ವಿಜಯಪುರ: ಕೋವಿಡ್ ಸೋಂಕು ಧೃಡಪಟ್ಟು ಈಗ ಸಂಪೂರ್ಣವಾಗಿ ಗುಣಮುಖರಾಗಿರುವ ವಕೀಲಆಸೀಫುಲ್ಲಾ ಖಾದ್ರಿ ತಮ್ಮ ರಕ್ತದ ಪ್ಲಾಸ್ಮಾವನ್ನು ಶ್ರೀ ಸಿದ್ದೇಶ್ವರ ಪ್ರಯೋಗಾಲಯಲ್ಲಿ ದಾನ ಮಾಡಿದರು.

ಖಾದ್ರಿ ಮಾತನಾಡಿ, ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರು ಮಾನವೀಯತೆ ಮೆರೆಯಬೇಕಿದೆ, ಪ್ಲಾಸ್ಮಾ ದಾನ ಮಾಡುವುದರಿಂದ ಯಾವುದೇ ರೀತಿ ಅಡ್ಡಪರಿಣಾಮ ಉಂಟು ಮಾಡುವುದಿಲ್ಲ. ಹೀಗಾಗಿ ಕೋವಿಡ್‌ನಿಂದ ಗುಣಮುಖರಾಗಿರುವ ಎಲ್ಲರೂ ಪ್ಲಾಸ್ಮಾ ದಾನ ಮಾಡಿದರೆ ಇನ್ನೊಂದು ಜೀವ ಉಳಿಸಿದ ಪುಣ್ಯ ಬರುತ್ತದೆ ಎಂದರು.

ಸರ್ಕಾರ ಸಹ ಪ್ಲಾಸ್ಮಾ ಥೆರೆಪಿಯ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡು, ಜನರಲ್ಲಿ ಜಾಗೃತಿ ಮೂಡಿಸಿದರೆ ಜನರ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ADVERTISEMENT

ಕೋವಿಡ್‌ ರೋಗಿಗಳ ಚೇತರಿಕೆಗೆಪ್ಲಾಸ್ಮಾ ಥೆರೆಪಿ ಸಹ ಒಂದಾಗಿದ್ದು ವಿಜಯಪುರದಲ್ಲಿ ಅನೇಕ ಆಸ್ಪತ್ರೆಯಲ್ಲಿ ಈ ಪದ್ಧತಿ ಮೂಲಕ ರೋಗಿಗಳನ್ನು ಗುಣಪಡಿಸಲಾಗುತ್ತಿದೆ.ಕೋವಿಡ್ ಸೋಂಕು ಧೃಡಪಟ್ಟ ವ್ಯಕ್ತಿ ಸಂಪೂರ್ಣವಾಗಿ ಗುಣಮುಖವಾದ ಬಳಿಕಆತನ ರಕ್ತದಲ್ಲಿ ಕೋವಿಡ್‌ ವಿರುದ್ಧ ಹೋರಾಡುವ ರಕ್ತಕಣ (ಪ್ಲಾಸ್ಮಾ ಅಂಶ) ವೃದ್ಧಿಸುತ್ತವೆ, ಈ ಅಂಶಗಳನ್ನೇ ಕೋವಿಡ್ ರೋಗಿಗೆ ಹಾಕಿದ್ದಲ್ಲಿ ಆ ರೋಗಿ ಸಂಪೂರ್ಣವಾಗಿ ಗುಣಮುಖವಾಗುವ ಸಾಧ್ಯತೆಗಳು ಅಧಿಕವಾಗಿವೆ ಎಂದು ವೈದ್ಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.