ADVERTISEMENT

ಚಡಚಣ | ‘ಗೃಹಲಕ್ಷ್ಮಿ’ ನೆರವು: ಸೂರು ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 4:21 IST
Last Updated 21 ಜನವರಿ 2025, 4:21 IST
ಚಡಚಣ ಸಮೀಪದ ಶಿರಾಡೋಣ ಗ್ರಾಮದ ನೀಲಾಬಾಯಿ ಪಾಂಡ್ರೆ ಅವರು ಗೃಹಲಕ್ಷ್ಮಿ ಹಣದ ನೆರವಿನಿಂದ ಕಟ್ಟಿಕೊಂಡಿರುವ ಪತ್ರಾಸ್‌ ಮನೆ
ಚಡಚಣ ಸಮೀಪದ ಶಿರಾಡೋಣ ಗ್ರಾಮದ ನೀಲಾಬಾಯಿ ಪಾಂಡ್ರೆ ಅವರು ಗೃಹಲಕ್ಷ್ಮಿ ಹಣದ ನೆರವಿನಿಂದ ಕಟ್ಟಿಕೊಂಡಿರುವ ಪತ್ರಾಸ್‌ ಮನೆ   

ಚಡಚಣ: ಸರ್ಕಾರದ ‘ಗೃಹಲಕ್ಷ್ಮಿ’ ಹಣದ ನೆರವಿನಿಂದ ತಾಲ್ಲೂಕಿನ ಕರ್ನಾಟಕ-ಮಹಾರಾಷ್ಟ್ರದ ಗಡಿ ಅಂಚಿನ ಚಡಚಣ ತಾಲ್ಲೂಕಿನ ಶಿರಾಡೋಣ ಗ್ರಾಮದಲ್ಲಿ ಮಹಿಳೆಯೊಬ್ಬರು ಪತ್ರಾಸ್‌ ಮನೆ ಕಟ್ಟಿಕೊಂಡಿದ್ದಾರೆ.

ಶಿರಾಡೋಣ ಗ್ರಾಮದ ಗೃಹಿಣಿ ನೀಲಾಬಾಯಿ ಗಂಗಣ್ಣ ಪಾಂಡ್ರೆ ತಮಗೆ ಬಂದ  ಗೃಹಲಕ್ಷ್ಮಿ ಹಣ ₹30 ಸಾವಿರದೊಂದಿಗೆ ಇನ್ನಷ್ಟು ಹಣ ಹೊಂದಿಸಿಕೊಂಡು ₹1 ಲಕ್ಷ ವೆಚ್ಚದಲ್ಲಿ ಪತ್ರಾಸ್‌ ಮನೆ ನಿರ್ಮಿಸಿಕೊಂಡಿದ್ದಾರೆ.

ಮನೆಗೆ ‘ಗೃಹಲಕ್ಷ್ಮಿ ನಿಲಯ’ ಎಂದು ನಾಮಕರಣ ಮಾಡಿದ್ದೂ ಅಲ್ಲದೆ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭಾವಚಿತ್ರ
ವನ್ನು ಅಂಟಿಸಿ ‘ಸಿದ್ಧರಾಮಯ್ಯ ಕೃಪೆ’ ಎಂದು ಬರೆಸಿದ್ದಾರೆ.

ADVERTISEMENT

‘ನಿತ್ಶ ಕೂಲಿ ಮಾಡಿ ಬದುಕುವ ನಮಗೆ ಸ್ವಂತ ಸೂರು ಹೊಂದುವ ಬಹುದಿನಗಳ ಆಸೆ ಇತ್ತು. ಸರ್ಕಾರದ
ಯೋಜನೆಗಳಿಂದ ಕನಸು ನನಸಾಯಿತು’ ಎಂದು ನೀಲಾಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.