ಆಲಮೇಲ: ರುಕುಂಪೂರ ರಸ್ತೆ ತೆರವು ಮಾಡಲು ಒತ್ತಾಯಿಸಿ ನಡೆದ ಹೋರಾಟ ಗುರುವಾರ 9ನೇ ದಿನಕ್ಕೆ ಕಾಲಿಟ್ಟಿದೆ. ಪಟ್ಟಣದ ವರ್ತಕರು ಹಾಗೂ ಮಹಿಳಾ ಸಂಘಟನೆಗಳ ಸದಸ್ಯರು ಮತ್ತು ಪ್ರಗತಿಪರ ಪರ ಹೋರಾಟ ಸಮಿತಿ ಗುರುವಾರ ಆಲಮೇಲ ಬಂದ್‌ಗೆ ಕರೆ ನೀಡಿದ್ದು, ಸ್ವಯಂ ಘೋಷಿತವಾಗಿ ಸರ್ವ ಜನತೆ ಬೆಂಬಲ ಸೂಚಿಸಿದ್ದಾರೆ.
ಎಸಿ ಭೇಟಿ: ಪಟ್ಟಣದ ರುಕುಂಪೂರ ರಸ್ತೆ ತೆರವು ಹಾಗೂ ವಿವಿಧ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರಗತಿಪರ ಒಕ್ಕೂಟ ಸಂಘಟನೆಗಳು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬುಧವಾರ ಇಂಡಿ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಭೇಟಿ ನೀಡಿದರು.
ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಮಾತನಾಡಿ, ತಮ್ಮ ಮುಖ್ಯ ಬೇಡಿಕೆಗಳ ಬಗ್ಗೆ ನಡೆಸುತ್ತಿರುವ ಹೋರಾಟ ಗಮನಕ್ಕೆ ಬಂದಿದ್ದು ಈ ಬಗ್ಗೆ ತಹಶೀಲ್ದಾರ್, ಎಡಿಎಲ್‌ಆರ್ ಜೊತೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದೇವೆ. ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಈಗಾಗಲೆ ಎರಡು ಮೂರು ಬಾರಿ ಎಡಿಎಲ್‌ಆರ್ ಸರ್ವೆ ಮಾಡಿದ್ದು, ನಾಳೆ ಅದರ ವರದಿ ಬರಲಿದೆ. ಅದರ ಆಧಾರದ ಮೇಲೆ ಮುಂದಿನ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.
ಹೋರಾಟಗಾರರಾದ ಹರಿಶ ಎಂಟಮಾನ, ಪ್ರಭು ವಾಲಿಕಾರ ಮಾತನಾಡಿರು.
ಪಟ್ಟಣ ಪಂಚಾಯತಿ ಸದಸ್ಯ ಸಂಜೀವಕುಮಾರ ಎಂಟಮಾನ, ಬಸವರಾಜ ತೆಲ್ಲೂರ, ಅಯೂಬ ದೇವರಮನಿ, ಜಗದೀಶ ದಾಳಿ, ಸೋಮು ಮೇಲಿಮನಿ, ಅಪ್ಪು ಶೆಟ್ಟಿ, ಶ್ರೀಶೈಲ ಭೋವಿ, ಶಶಿ ಗಣಿಯಾರ, ಪಿ.ಟಿ ಪಾಟೀಲ, ನಿಂಬೋಜಿ ಚೋರಮಲ್ಲ ಮುಂತಾದವರು ಇದ್ದರು.
ವೈದ್ಯರ ಬೆಂಬಲ: ಬುಧವಾರದ ಧರಣಿ ಸತ್ಯಾಗ್ರಹದಲ್ಲಿ ಪಟ್ಟಣದ ಎಲ್ಲ ವೈದ್ಯರು ಭಾಗವಹಿಸಿ ಹೋರಾಟಗಾರರಿಗೆ ನೈತಿಕ ಬೆಂಬಲ ಸೂಚಿಸಿದರು. ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಚಾಲಕರು ಹಾಗೂ ಮಾಲೀಕರು ಮಂಗಳವಾರದದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.