ADVERTISEMENT

₹ 2000 ಲಂಚ ಕೇಳಿದ್ದ ಭೂ ಮಾಪನ ಅಧಿಕಾರಿ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 6 ಮೇ 2019, 15:27 IST
Last Updated 6 ಮೇ 2019, 15:27 IST

ಮುದ್ದೇಬಿಹಾಳ: ಭೂ ಮಾಪನ ಮಾಡಲು ₹ 2000 ಲಂಚ ಕೇಳಿದ್ದ ಭೂಮಾಪನ ಇಲಾಖೆಯ ಸಿಬ್ಬಂದಿಯೊಬ್ಬ ಸೋಮವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಮುದ್ದೇಬಿಹಾಳ ಪಟ್ಟಣದ ಭೂ ಮಾಪನ ಇಲಾಖೆಯಿಂದ ಸರ್ವೇ ಮಾಡಲು ಲೈಸೆಸ್ಸ್‌ಪಡೆದಿರುವ ದೇವಾನಂದ ರಾಠೋಡ, ಕೆಲಸ ಮಾಡಲು ತಾಲ್ಲೂಕಿನ ತುಂಬಗಿ ಗ್ರಾಮದ ಪಾಡುರಂಗ ರಾಠೋಡ ಅವರಿಗೆ ₹ 2000 ಲಂಚ ಕೇಳಿದ್ದ. ಈ ಹಣವನ್ನು ಪಡೆಯುವಾಗ ಎಸಿಬಿ ದಳದ ಜಿಲ್ಲಾ ಡಿ.ಎಸ್.ಪಿ.ರಘು ನೇತೃತ್ವದ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ.ಪಿಎಸ್ಐ ಎಸ್.ಆರ್.ಗಣಾಚಾರಿ ಹಾಗೂ ಎಸಿಬಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT