ADVERTISEMENT

ಎಸಿಬಿ ಬಲೆಗೆ ಇಬ್ಬರು ಕಾರ್ಮಿಕ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 16:08 IST
Last Updated 10 ನವೆಂಬರ್ 2020, 16:08 IST
ಎಸಿಬಿ
ಎಸಿಬಿ   

ವಿಜಯಪುರ: ಪೆಟ್ರೋಲ್‌ ಪಂಪ್‌ನ ಲೇಬರ್‌ ಲೈಸನ್ಸ್‌ ನವೀಕರಣ ಸಂಬಂಧ ಮಂಗಳವಾರ ಲಂಚ ಪಡೆಯುತ್ತಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಡೊಂಬರಮತ್ತೂರ ಮತ್ತು ಕಾರ್ಮಿಕ ನಿರೀಕ್ಷಕಿ ಲಲಿತಾ ರಾಠೋಡ ಅವರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ಇಂಡಿ ಪಟ್ಟಣದ ರೂಪೇಶ ಶಹಾ ಎಂಬುವವರ ತಾಯಿ ಹೆಸರಿನಲ್ಲಿ ಇರುವ ಪೆಟ್ರೋಲ್‌ ಬಂಕ್‌ನ ಲೇಬರ್‌ ಲೈಸನ್ಸ್‌ ನವೀಕರಣ ಮಾಡಿಲು ₹10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು ₹ 5 ಸಾವಿರ ಲಂಚವನ್ನು ಮೊದಲೇ ಪಡೆದುಕೊಂಡಿದ್ದರು. ಬಳಿಕ ಮತ್ತೆ ₹ 5 ಸಾವಿರ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದಾರೆ.

ವಿಜಯಪುರ ಎಸಿಬಿ ಪೊಲೀಸ್‌ ಠಾಣೆಯ ಡಿವೈಎಸ್‌ಪಿ ಎಂ.ಕೆ. ಗಂಗಲ್‌ ನೇತೃತ್ವದಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಹರೀಶಚಂದ್ರ, ಪಿ.ಜಿ.ಕವಟಗಿ, ಸಿಬ್ಬಂದಿಗಳಾದ ಮಹೇಶ ಪೂಜಾರಿ, ಸುರೇಶ ಜಾಲಗೇರಿ, ಅಶೋಕ ಸಿಂಧೂರ, ಈರಣ್ಣ ಕನ್ನೂರ, ಮದನ್‌ಸಿಂಗ್‌ ರಜಪೂತ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.