ADVERTISEMENT

ಅಪಘಾತ: ಬಾಲಕ ಸಾವು, ಐವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 3 ಮೇ 2019, 15:31 IST
Last Updated 3 ಮೇ 2019, 15:31 IST
   

ಸಿಂದಗಿ (ವಿಜಯಪುರ):ತಾಲ್ಲೂಕಿನ ಮೋರಟಗಿ ಬೈಪಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಶುಕ್ರವಾರ ನಡೆದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಹಾಗೂ ಲಾರಿ ನಡುವಿನ ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹುಣಶ್ಯಾಳ ಗ್ರಾಮದ ಮಂಜುನಾಥ ರುದ್ರಪ್ಪ ಹಿಪ್ಪರಗಿ (16) ಮೃತ ಬಾಲಕ.

ಜೇರಟಗಿಯ -ಯಮನೂರಿ ರಾಜಣ್ಣ ಇಂಗಳೆ, ಸಿದ್ದಪ್ಪ ವಸ್ತಾರಿ, ಗಬಸಾವಳಗಿಯ ಚಂದ್ರಶೇಖರ ಹಡಪದ, ಬಸ್‌ನ ನಿರ್ವಾಹಕ ಅರ್ಜುನ ನಾಯ್ಕ್‌, ಕಲಬುರ್ಗಿಯ ಶಬ್ಬೀರ ಪಟೇಲ ಗಾಯಗೊಂಡಿದ್ದು, ಈ ಎಲ್ಲರೂ ಅಪಘಾತಕ್ಕೀಡಾದ ಬಸ್‌ನಲ್ಲಿ ಪಯಣಿಸುತ್ತಿದ್ದರು.

ADVERTISEMENT

ಗಾಯಾಳುಗಳಿಗೆ ಸಿಂದಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ.

ಕಲಬುರ್ಗಿಯಿಂದ ವಿಜಯಪುರಕ್ಕೆ ಬರುತ್ತಿದ್ದ ಬಸ್‌ಗೆ, ಸಿಂದಗಿಯಿಂದ ಕಲಬುರ್ಗಿಯತ್ತ ತೆರಳುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ನಡೆದಿದೆ ಎಂದು ಸಿಂದಗಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.