
ಸಿಂದಗಿ: ವಿಜಯಪುರ ನಗರದ ವಕೀಲ ಮೈಬೂಬ ಇಂಡೀಕರ ಇವರ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆಯನ್ನು ಖಂಡಿಸಿ ನಗರದ ವಕೀಲರು ಬುಧವಾರ ಕೋರ್ಟ್ ಕಲಾಪದಿಂದ ದೂರ ಉಳಿದರು.
ವಕೀಲರ ಸಂಘದ ಕಾರ್ಯಾಲಯದಲ್ಲಿ ನಡೆದ ಖಂಡನಾ ಸಭೆಯಲ್ಲಿ ಸಂಘದ ಅಧ್ಯಕ್ಷ ಎಸ್.ಬಿ. ಪಾಟೀಲ ಮಾತನಾಡಿ, ‘ವಕೀಲರ ಮೇಲೆ ನಡೆದ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ವಕೀಲರ ಸಂಘದ ಸದಸ್ಯರು ತಹಶೀಲ್ದಾರ್ ಗ್ರೇಡ್-2 ಇಂದಿರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ.ಸೂರ್ಯವಂಶಿ, ಹಿರಿಯ ವಕೀಲರಾದ ಆರ್.ಐ.ಮೊಗಲಾಯಿ, ಆರ್.ಡಿ.ಕುಲಕರ್ಣಿ, ಆರ್.ಎಂ.ಚೌರ, ಎಸ್.ಬಿ.ಖಾನಾಪೂರ, ಐ.ಎಸ್.ಹಿರೇಮಠ, ಬಿ.ಸಿ.ಪಾಟೀಲ, ಎಸ್.ಕೆ.ಪೂಜಾರಿ, ಎ.ಆರ್.ಕನ್ನೂರ, ವಕೀಲರ ಸಂಘದ ಮಹಿಳಾ ಪ್ರತಿನಿಧಿ ಎಸ್.ಎಂ.ಕಾಚೂರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.