ADVERTISEMENT

ಆಲಮಟ್ಟಿ: ಈರುಳ್ಳಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 14:25 IST
Last Updated 29 ಮಾರ್ಚ್ 2025, 14:25 IST
ಆಲಮಟ್ಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಯಾಗಿದ್ದು, ಈರುಳ್ಳಿ ತುಂಬಿದ್ದ ಚೀಲಗಳು ರಸ್ತೆ ತುಂಬೆಲ್ಲಾ ಬಿದ್ದಿರುವುದು
ಆಲಮಟ್ಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಯಾಗಿದ್ದು, ಈರುಳ್ಳಿ ತುಂಬಿದ್ದ ಚೀಲಗಳು ರಸ್ತೆ ತುಂಬೆಲ್ಲಾ ಬಿದ್ದಿರುವುದು   

ಆಲಮಟ್ಟಿ: ಇಲ್ಲಿನ 77 ಎಕರೆ ಉದ್ಯಾನಗಳ ಸಮುಚ್ಛಯದ ಎಂಟ್ರನ್ಸ್ ಪ್ಲಾಜಾ ಬಳಿಯಲ್ಲಿ ಈರುಳ್ಳಿ ತುಂಬಿದ ವಾಹನವೊಂದು ನಿಯಂತ್ರಣ ತಪ್ಪಿ ಕಾರು ಹಾಗೂ ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಶನಿವಾರ ಸಂಜೆ ಜರುಗಿದೆ.

ಕೊಲ್ಹಾರದಿಂದ ಆಲಮಟ್ಟಿ ಮೂಲವಾಗಿ ಬಂಗಾರಪೇಟೆಗೆ ಹೋಗುತ್ತಿದ್ದ ಈರುಳ್ಳಿ ತುಂಬಿದ್ದ ಕ್ಯಾಂಟರ್‌, ಎಂಟ್ರನ್ಸ್ ಪ್ಲಾಜಾ ಎದುರಿನಲ್ಲಿರುವ ಇಳಿಜಾರು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಕಾರು ಮತ್ತು ಕ್ರೂಸರ್ ವಾಹನಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಇದರಿಂದ ಈರುಳ್ಳಿ ತುಂಬಿದ್ದ ಚೀಲಗಳೆಲ್ಲ ರಸ್ತೆಯಲ್ಲಿ ಬಿದ್ದಿದ್ದವು.

ಆಲಮಟ್ಟಿ ಅಣೆಕಟ್ಟು ವೃತ್ತ ಪ್ರದೇಶ ಸೂಕ್ಷ್ಮ ಪ್ರದೇಶವಾಗಿದ್ದರಿಂದ ಇಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ಹೀಗಿದ್ದರೂ ಈರುಳ್ಳಿ ತುಂಬಿದ ವಾಹನವನ್ನು ಈ ರಸ್ತೆಯಲ್ಲಿ ಸಂಚರಿಸಲು ಏಕೆ ಬಿಟ್ಟರು ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ADVERTISEMENT
ಆಲಮಟ್ಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಯಾಗಿದ್ದು ಈರುಳ್ಳಿ ತುಂಬಿದ್ದ ಚೀಲಗಳು ರಸ್ತೆ ತುಂಬೆಲ್ಲಾ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.