ADVERTISEMENT

ಆಲಮಟ್ಟಿ; ಆರು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 3:13 IST
Last Updated 16 ಆಗಸ್ಟ್ 2025, 3:13 IST
ಆಲಮಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮುಖ್ಯ ಎಂಜಿನಿಯರ್ ಡಿ.ಬಸವರಾಜ ಧ್ವಜಾರೋಹಣ ನೆರವೇರಿಸಿದರು
ಆಲಮಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮುಖ್ಯ ಎಂಜಿನಿಯರ್ ಡಿ.ಬಸವರಾಜ ಧ್ವಜಾರೋಹಣ ನೆರವೇರಿಸಿದರು   

ಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಆಲಮಟ್ಟಿಯ ನಾಲ್ಕು ವಿವಿಧ ಶಾಲೆಗಳಿಗೆ ತಲಾ ಒಂದರಂತೆ ಸ್ಮಾರ್ಟ್ ಕ್ಲಾಸ್, ಸ್ಮಾರ್ಟ್ ಬೋರ್ಡ್, ಜತೆಗೆ ಪ್ರತಿ ವರ್ಗದ ಪರಿಣಿತರ ಇ- ವಿಷಯಗಳನ್ನು ಒದಗಿಸಲಾಗುವುದು ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ.ಬಸವರಾಜ ಹೇಳಿದರು.

ಆಲಮಟ್ಟಿಯ ಸರ್ಕಾರಿ ಶಾಲೆಯ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕೆಬಿಜೆಎನ್‌ಎಲ್‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಕ್ಕಳಿಂದ ಪಥಸಂಚಲನದ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.

ಆಲಮಟ್ಟಿಯನ್ನು ಇನ್ನಷ್ಟು ಹೆಚ್ಚು ಪ್ರವಾಸಿ ತಾಣವನ್ನಾಗಿ ಮಾಡಲು ಈಗಾಗಲೇ ಪೂರ್ಣಗೊಂಡಿರುವ ವಾಟರ್ ಅಮ್ಯೂಸ್ ಮೆಂಟ್ ಪಾರ್ಕ್ ಶೀಘ್ರ ಉದ್ಘಾಟಿಸಲಾಗುವುದು, ಜತೆಗೆ ಜಲಾಶಯಕ್ಕೆ ವೀಕ್ಷಣಾ ಗ್ಯಾಲರಿ ನಿರ್ಮಿಸಲಾಗುವುದು ಎಂದರು.

ADVERTISEMENT

ನೌಕರರ ಸಂಘದ ಅಧ್ಯಕ್ಷ ಎಸ್.ಬಿ.‌ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ‌ಅಧಿಕಾರಿಗಳಾದ ವಿ.ಆರ್.ಹಿರೇಗೌಡರ, ತಾರಾಸಿಂಗ್ ದೊಡಮನಿ, ಅರುಣ ಡಿ.ವಿ, ಐ‌.ಎಲ್. ಕಳಸಾ, ಎನ್.ಕೆ. ಬಾಗಾಯತ್, ಮಹೇಶ ಪಾಟೀಲ, ಶಿವಲಿಂಗ ಕುರೆನ್ನವರ, ಅಹ್ಮದ್ ಸಂಗಾಪುರ, ಜಯಣ್ಣ, ಪಿ.ಎ. ಹೇಮಗಿರಿಮಠ, ಬಿ.ಎಸ್.ಯರವಿನತೆಲಿಮಠ, ಜಿ.ಎಂ. ಕೊಟ್ಯಾಳ, ಎಸ್.ಐ.ಗಿಡ್ಡಪ್ಪಗೋಳ, ರಾಮಕೃಷ್ಣಯ್ಯ , ವೈ.ಎಂ. ಪಾತ್ರೋಟ, ಬಿ.ಜಿ. ಬನ್ನೂರ , ಮಹೇಶ ಗಾಳಪ್ಪಗೋಳ ಮತ್ತಿತರರು ಇದ್ದರು.

ಎರಡು ಸ್ಮಾರ್ಟ್ ಕ್ಲಾಸ್ ಕೊಡುಗೆ: ಬಿ.ಎಸ್. ಚನ್ನಬಸಪ್ಪ ಕಂಪನಿ ಘೋಷಣೆ

ಧ್ವಜಾರೋಹಣ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿ ಭಾಗವಹಿಸಿದ್ದ ದಾವಣಗೆರೆಯ ಪ್ರತಿಷ್ಠಿತ ಬಿ.ಎಸ್. ಚನ್ನಬಸಪ್ಪ ಜವಳಿ ಅಂಗಡಿಯ ಮುಖ್ಯಸ್ಥ ಬಿ.ಎಸ್.ಶಿವಕುಮಾರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮೃಣಾಲ ಶಿವಕುಮಾರ ಅವರು ವೈಯಕ್ತಿಕವಾಗಿ ಎರಡು ಶಾಲೆಗಳಿಗೆ ತಲಾ ಎರಡು ಲಕ್ಷ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಒದಗಿಸುವುದಾಗಿ ಘೋಷಿಸಿದರು.

ಸನ್ಮಾನ: ಸ್ಮಾರ್ಟ್ ಕ್ಲಾಸ್ ನೀಡಿದ ಬಿ.ಎಸ್.ಶಿವಕುಮಾರ, ಮೃಣಾಲ ಶಿವಕುಮಾರ, ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ, ಸಾವಿತ್ರಿ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ಮಕ್ಕಳ ಆಕರ್ಷಕ ಪಥಸಂಚಲನ, ನೃತ್ಯಗಳು ಪ್ರದರ್ಶನಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.