ADVERTISEMENT

ಆಲಮಟ್ಟಿ: ವಿದ್ಯುತ್ ತಗುಲಿ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:15 IST
Last Updated 27 ಅಕ್ಟೋಬರ್ 2025, 4:15 IST
ಅಭಿಷೇಕ ಪಠಾಣಕರ
ಅಭಿಷೇಕ ಪಠಾಣಕರ   

ಆಲಮಟ್ಟಿ: ಆಡುಗಳ ಆಹಾರಕ್ಕಾಗಿ ಗಿಡದ ಎಲೆ ಹರಿಯಲು ಹೋಗಿ ಗಿಡದ ಮೇಲೆ ಹತ್ತಿದ್ದ ಯುವಕನಿಗೆ ವಿದ್ಯುತ್ ತಗುಲಿ ನೆಲಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ, ಇಲ್ಲಿಯ ಎಂ.ಎಚ್.ಎಂ. ಪ್ರೌಢಶಾಲೆಯ ಎದುರಿನ ಪ್ರದೇಶದಲ್ಲಿ ನಡೆದಿದೆ.

ಆಲಮಟ್ಟಿಯ ನಿವಾಸಿ ಅಭಿಷೇಕ ಅಶೋಕ ಪಠಾಣಕರ (18) ಮೃತ ಯುವಕ. ಈತ ಇಲ್ಲಿಯ ಎಂಎಚ್ಎಂ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ. 

ಅಭಿಷೇಕ ಹಾಗೂ ಆತನ ಮಿತ್ರ ಆಡಿಗಾಗಿ ತಪ್ಪಲು ಹರಿಯಲು ಹೋಗಿದ್ದರು. ಗಿಡ ಏರಿದ್ದ ಅಭಿಷೇಕ, ತಪ್ಪಲು ಹರಿಯಲು ಗಿಡದ ಟೊಂಗೆ ಮುರಿದಾಗ, ಆ ಟೊಂಗೆ ಗಿಡದ ಬಳಿ ಹಾದು ಹೋಗಿದ್ದ ವಿದ್ಯುತ್ ಹೈಟೆನ್ಶನ್ ತಂತಿಗೆ ತಗುಲಿ ವಿದ್ಯುತ್‌ ಸ್ಪರ್ಶವಾಯಿತು. ಗಿಡದಿಂದ ನೆಲಕ್ಕೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಭಿಷೇಕನನ್ನು ತಕ್ಷಣ ನಿಡಗುಂದಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಆತ ಮೃತಪಟ್ಟ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.