ಸಿಂದಗಿ: ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಹಾರಾಷ್ಟ್ರದ ನಾಶಿಕ್‌ನ ಡೋಲು ವಾದ್ಯಗಳು, ಗೊಂಬೆಗಳು, ಕಲಾ ತಂಡಗಳು ವಿಶೇಷವಾಗಿದ್ದವು.
ಡಿ.ಜೆ ಸದ್ದಿಗೆ ಮಹಿಳೆಯರು, ಯುವಕರು ಕುಣಿದು ಕುಪ್ಪಳಿಸಿದರು.
ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ದಲಿತ ಸಂಘಟನೆಗಳ ಪ್ರಮುಖರಾದ ಚಂದ್ರಕಾಂತ ಸಿಂಗೆ, ಶ್ರೀಕಾಂತ ಸೋಮಜಾಳ, ಪರುಶರಾಮ ಕಾಂಬಳೆ, ರವಿ ಹೋಳಿ, ಮಲ್ಲೂ ಕೂಚಬಾಳ, ದತ್ತು ನಾಲ್ಕಮಾನ, ರಮೇಶ ನಡುವಿನಕೇರಿ, ಶ್ರೀನಿವಾಸ ಓಲೇಕಾರ, ರಾವುತ ತಳಕೇರಿ, ಬಾಲಕೃಷ್ಣ ಚಲವಾದಿ, ಧರ್ಮಣ್ಣ ಎಂಟಮಾನ, ಸಂತೋಷ ಜಾಧವ (ಬಜಂತ್ರಿ), ಶ್ರೀಶೈಲ ಜಾಲವಾದಿ, ರಾಕೇಶ ಕಾಂಬಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.