ADVERTISEMENT

ಮಕ್ಕಳ ಕಳ್ಳರೆಂದು ಭಾವಿಸಿ ಸಾರ್ವಜನಿಕರಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 15:28 IST
Last Updated 24 ಸೆಪ್ಟೆಂಬರ್ 2022, 15:28 IST

ವಿಜಯಪುರ:ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ನಾಲ್ವರನ್ನು ಹಿಡಿದು ಸಾರ್ವಜನಿಕರು ಥಳಿಸಿರುವ ಘಟನೆನಗರದಗ್ಯಾಂಗ್ ಬಾವಡಿಯಲ್ಲಿ ಶನಿವಾರ ನಡೆದಿದೆ.

ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರನ್ನು ಹಿಡಿದು ಹಲ್ಲೆ ಮಾಡಿದ ಸ್ಥಳೀಯರು
ನಂತರ ಗಾಂಧಿಚೌಕ್ ಪೊಲೀಸರಿಗೆ ಒಪ್ಪಿಸಿದರು.

ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ ಪೊಲೀಸರು ಬಳಿಕ ವಿಚಾರಣೆ ನಡೆಸಿದಾಗನಾಲ್ವರು ದೆಹಲಿ ಮೂಲದ ವ್ಯಾಪಾರಸ್ಥರು ಎಂದು ತಿಳಿದುಬಂದಿದೆ.

ADVERTISEMENT

ಅವರ ಬಳಿ ಇದ್ದ ಆಧಾರ್ ಕಾರ್ಡ್ ಹಾಗೂ ಇತರೆ ದಾಖಲಾತಿಗಳ ತಪಾಸಣೆ ಮಾಡಿದಾಗಶಾಂತಾ, ಜಿಹಾನ್, ಶಾಹೀದ್ ಮತ್ತು ಹಕೀಮ್ ಎಂದು ಹೆಸರು ತಿಳಿದುಬಂದಿದೆ.

ಹಲ್ಲೆ ಮಾಡದಂತೆ ಸೂಚನೆ:

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ಅರಸಿದ್ಧಿ, ಸಾರ್ವಜನಿಕರಿಂದ ಹಲ್ಲೆಗೊಳಗಾದವರು ಮಕ್ಕಳ ಕಳ್ಳರಲ್ಲ. ಅವರು ದೆಹಲಿಯಿಂದ ವಿಜಯಪುರಕ್ಕೆ ಬಂದು ಬಾಡಿಗೆ ಮನೆ ಮಾಡಿಕೊಂಡು ಒಂದು ತಿಂಗಳಿಂದ ವಾಸವಾಗಿದ್ದಾರೆ. ಚಕ್ಕಲಿ ತಯಾರಿಸುವ ಒರಳು ಮಾರಾಟ ಮಾಡುವವರಾಗಿದ್ದಾರೆ. ಸದ್ಯ ಇರುವ ಮನೆಯನ್ನು ಬಿಟ್ಟು ಬೇರೊಂದು ಮನೆಯ ಹುಡುಕಾಟದಲ್ಲಿ ತೊಡಗಿದ್ದಾಗ ಜನ ತಪ್ಪಾಗಿ ಭಾವಿಸಿ ಹಲ್ಲೆ ಮಾಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಸಾರ್ವಜನಿಕರು ಅಪರಿಚಿತರು ಕಂಡುಬಂದಾಗ ವಿಚಾರಣೆ ಮಾಡದೇ ಏಕಾಏಕಿ ಹಲ್ಲೆ ಮಾಡಬಾರದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.