ಆಲಮಟ್ಟಿ: ಸಮೀಪದ ವಂದಾಲ ಗ್ರಾಮದ ಶಾಕಂಬರಿ ಪ್ರೌಢಶಾಲೆಯ ವಿದ್ಯಾರ್ಥಿ ಅಶ್ವಥ್ ಗುರುಪಾದಪ್ಪ ಹಟ್ಟಿ ಶೇ 95.36 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಅಶ್ವಥ್ ಅವರ ತಂದೆ ಗುರುಪಾದಪ್ಪ ಆಟೊ ಚಾಲಕರಾಗಿದ್ದಾರೆ. ನಿತ್ಯ ಆಟೊ ಓಡಿಸಿ ಕುಟುಂಬವನ್ನು ನಿರ್ವಹಿಸುತ್ತಾರೆ.
ಶಾಲೆಗೆ ಶಿವಾನಂದ ಮಲ್ಲಪ್ಪ ತಿಮ್ಮಾಪುರ ದ್ವಿತೀಯ ಹಾಗೂ ಹನುಮಗೌಡ ಢವಳಗಿ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.