
ವಿಜಯಪುರ: ಬಸವಾದಿ ಪ್ರಮಥರ ವಚನಗಳು ನಮ್ಮೆಲ್ಲರ ಬದುಕಿಗೆ ದಾರಿದೀಪಗಳಾಗಿವೆ. ಬಸವ ಧರ್ಮ ವಿಶ್ವ ಧರ್ಮವಾಗಬೇಕು ಎಂದು ಶ್ರೀ ಶಾಂತವೀರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ ಎಂ.ಬಿ.ರೆಬಿನಾಳ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ, ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿ. ಧರೆಪ್ಪ ಮತ್ತು ಬಸಮ್ಮ ಐಹೊಳ್ಳಿ ದಂಪತಿ ಸ್ಮಾರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಂಸ್ಕೃತಿಕ ನಾಯಕ ಬಸವಣ್ಣ ಎಂದೆಂದಿಗೂ ಪ್ರಸ್ತುತ. ದಾನ, ದಾಸೋಹ, ಧರ್ಮ, ಪೂಜೆ ಇವೆಲ್ಲ ತೋರಿಕೆ ಮತ್ತು ಡಾಂಬಿಕತೆಯಿಂದ ಕೂಡಿರಬಾರದು ಎಂದರು.
ಬಿ.ಎಲ್.ಡಿ.ಇ. ಸಂಸ್ಥೆ, ಎಸ್. ಎಸ್. ಆವರಣದ ಆಡಳಿತಾಧಿಕಾರಿ ಪ್ರೊ ಐ.ಎಸ್. ಕಾಳಪ್ಪನವರ ಮಾತನಾಡಿ, ಹಿರಿಯರ ಮೌಲ್ಯಗಳ ಸ್ಮರಣೆಗಾಗಿ ನಡೆಸಿದ ಈ ದತ್ತಿ ಉಪನ್ಯಾಸ ಕಾರ್ಯಕ್ರಮವು ಬಹಳಷ್ಟು ಅರ್ಥಪೂರ್ಣವಾಗಿದೆ. ಈ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಭಾರತಿ. ವೈ. ಖಾಸನೀಸ ಅವರು ದಾನ, ಧರ್ಮಕ್ಕೆ ಮಾದರಿಯಾಗಿದ್ದಾರೆ. ಇವರು ಎಸ್. ಎಸ್. ಆವರಣದ ವಿವಿಧ ಶಾಲೆಗಳಿಗೆ ದಾನ-ದತ್ತಿಗಳನ್ನು ನೀಡಿದ್ದಾರೆ. ಮಹಾವಿದ್ಯಾಲಯದ ಆವರಣದಲ್ಲಿ ಸರಸ್ವತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಸಂಸ್ಥೆಯ ಸಮನ್ವಯ ಶಾಲೆಗೆ ಪೆನಲ್ ಬೋರ್ಡ್‌ನ್ನು ಕಾಣಿಕೆಯಾಗಿ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ವಿ.ಡಿ. ಐಹೊಳ್ಳಿ, ಪಟವರ್ಧನ, ಸಹ ಪ್ರಾಧ್ಯಾಪಕರಾದ ಎಂ.ಬಿ. ಕೋರಿ, ಜೆ.ಎಸ್.ಪಟ್ಟಣಶೆಟ್ಟಿ, ಬಿ.ಎಸ್.ಹಿರೇಮಠ, ಎಸ್.ಎಸ್.ಪಾಟೀಲ, ಪಿ.ಡಿ.ಮುಲ್ತಾನಿ, ಎಸ್.ಪಿ.ಶೇಗುಣಸಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.