ADVERTISEMENT

ಬಸವಚೇತನ ಪ್ರಶಸ್ತಿಗೆ ಶಿಕ್ಷಕಿ ಜಯಶ್ರೀ ಹೂಗಾರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:56 IST
Last Updated 4 ಜುಲೈ 2025, 13:56 IST
ಜಯಶ್ರೀ ಹೂಗಾರ
ಜಯಶ್ರೀ ಹೂಗಾರ   

ತಿಕೋಟಾ: ತಾಲ್ಲೂಕಿನ ಟಕ್ಕಳಕಿ ಎಲ್.ಟಿ. 02 ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಯಶ್ರೀ ಕೆ. ಹೂಗಾರ ಅವರಿಗೆ ಅಮ್ಮ ಫೌಂಡೇಷನ್‌ ವತಿಯಿಂದ ಕೊಡಮಾಡುವ ಬಸವಚೇತನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಭಾನುವಾರ ನಡೆಯುವ ರಾಜ್ಯ ಮಟ್ಟದ ಬಸವ ಸಂಸ್ಕೃತಿ ಉತ್ಸವದಲ್ಲಿ ಈ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ಹಲವು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇವರಿಗೆ ಗಣ್ಯ ವ್ಯಕ್ತಿಗಳ, ಚಿಂತಕರ ಹಾಗೂ ಸಾಹಿತಿಗಳ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT