ADVERTISEMENT

‘ಭಗತ್‌ಸಿಂಗ್ ಚಿಂತನೆ ಯುವಕರಿಗೆ ಮಾರ್ಗದರ್ಶಿ’

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 16:13 IST
Last Updated 28 ಸೆಪ್ಟೆಂಬರ್ 2024, 16:13 IST
ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಶನಿವಾರ ಭಗತಸಿಂಗ್ ಜಯಂತಿ ಆಚರಿಸಲಾಯಿತು
ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಶನಿವಾರ ಭಗತಸಿಂಗ್ ಜಯಂತಿ ಆಚರಿಸಲಾಯಿತು   

ವಿಜಯಪುರ: ‘ಭಗತ್‌ಸಿಂಗ್ ಅವರ ಹೋರಾಟ, ತ್ಯಾಗ, ಬಲಿದಾನ, ಚಿಂತನೆಗಳು ಇಂದಿನ ಯುವಜನರ ಬದುಕಿಗೆ ಮಾರ್ಗದರ್ಶಿ’ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದ ಗ್ರಂಥಾಲಯದಲ್ಲಿ ಶನಿವಾರ ನಡೆದ ಭಗತಸಿಂಗ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾನವನಿಂದ ಮಾನವನ ಶೋಷಣೆ ತಡೆಗಟ್ಟುವ, ಅಸಮಾನತೆಯನ್ನು ತೊಡೆದು ಹಾಕುವ ಸಮಾಜವಾದಿ ಭಾರತ ನಿರ್ಮಾಣ ಭಗತ್ ಸಿಂಗ್ ಕನಸಾಗಿತ್ತು. ಭಗತ್ ಸಿಂಗ್ ಅವರ ಆಲೋಚನೆಗಳು, ಅವರ ಕ್ರಾಂತಿಕಾರಿ ಮನೋಭಾವ ಹಾಗೂ ನ್ಯಾಯ, ಸ್ವಾತಂತ್ರ್ಯಕ್ಕಾಗಿ ಇದ್ದ ಅವರ ನಿರಂತರ ಬದ್ಧತೆ ಇಂದಿಗೂ ಪ್ರೇರಣಾದಾಯಕ’ ಎಂದು ಹೇಳಿದರು.

ADVERTISEMENT

ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ‘ಕೇವಲ ತನಗಾಗಿ ಬದುಕದೇ ಇಡೀ ಜೀವನವನ್ನೇ ದೇಶದ ವಿಮೋಚನೆಗೋಸ್ಕರ ಮೀಸಲಿಟ್ಟ ಭಗತ್ ಸಿಂಗ್ ಇಂದು ನಮಗೆ ಆದರ್ಶವಾಗಬೇಕಾಗಿದೆ’ ಎಂದು ಹೇಳಿದರು.

ಪರಶುರಾಮ ರಜನಿಕರ, ಅನಂದ ಗಂಗನಳ್ಳಿ, ಚನ್ನಪ್ಪ ಹಂಡಿ, ಶರಣಬಸು ಹಂಡಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.