ADVERTISEMENT

ತಾಳಿಕೋಟೆ: ಸರ್ವಜ್ಞ ವಿದ್ಯಾಪೀಠದಲ್ಲಿ ಭಗವದ್ಗೀತಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2024, 15:47 IST
Last Updated 1 ಡಿಸೆಂಬರ್ 2024, 15:47 IST
   

ತಾಳಿಕೋಟೆ: ‘ಭಗವದ್ಗೀತೆ ನಮಗೆ ಧರ್ಮದ ಬಗ್ಗೆ ಮಾತ್ರವಲ್ಲ; ದುಷ್ಕೃತ್ಯ ಹಾಗೂ ನಕಾರಾತ್ಮಕ ಶಕ್ತಿಗಳಿಂದ ದೂರವಿದ್ದು ಉತ್ತಮ ಜೀವನವನ್ನು ಹೇಗೆ ನಡೆಸಬಹುದೆನ್ನುವುದರ ಕುರಿತು ತಿಳಿಸುತ್ತದೆ. ಇದರ ತತ್ವಗಳು ಇಂದಿಗೂ ಮನುಷ್ಯನಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ’ ಎಂದು ಭಗವದ್ಗೀತಾ ಅಭಿಯಾನದ ಸಂಚಾಲಕ ರಾಮಚಂದ್ರ ಹೆಗಡೆ ಹೇಳಿದರು.

ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಭಗವದ್ಗೀತಾ ಅಭಿಯಾನದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಭಗವದ್ಗೀತಾ ಶ್ಲೋಕ ಪಠಣ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ,  ‘ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳು ಜೀವನಕ್ಕೆ ಮಾರ್ಗದರ್ಶನವನ್ನು ನೀಡುವ ರಾಮಾಯಣ, ಮಹಾಭಾರತದ ಕಥೆಗಳನ್ನು ಮತ್ತು ಭಗವದ್ಗೀತೆಯ ಶ್ಲೋಕಗಳನ್ನು ಪಠಣ ಮಾಡಿ ಅದರ ಸಾರವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ADVERTISEMENT

ಭಗವದ್ಗೀತಾ ಅಭಿಯಾನದ ರಾಜ್ಯ ಸಂಚಾಲಕ ವೆಂಕಟರಮಣ ಹೆಗಡೆ, ಮುದ್ದೇಬಿಹಾಳ ತಾಲ್ಲೂಕು ಭಗವದ್ಗೀತಾ ಅಭಿಯಾನದ ಸಮಿತಿ ಅಧ್ಯಕ್ಷ ಶ್ರೀಶೈಲ ರೂಡಗಿ, ಪ್ರಶಿಕ್ಷಕಿ ರಂಜಿತಾ ಹೆಗಡೆ, ಮುಖ್ಯಶಿಕ್ಷಕ ಸಂತೋಷ ಪವಾರ, ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ಭೀಮನಗೌಡ ಸಾಸನೂರ, ಶಿವಲೀಲಾ ಚುಂಚೂರ, ರಮೇಶ ಪಾಸೊಡಿ ಇದ್ದರು. ರಾಜು ಜವಳಗೇರಿ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.