ADVERTISEMENT

ಎಐ ಶೃಂಗಸಭೆಗೆ ಅಡ್ಡಿ; ಕಾಂಗ್ರೆಸ್‌ ಕಚೇರಿಗೆ ಬಿಜೆಪಿ ಮುತ್ತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 0:40 IST
Last Updated 22 ಫೆಬ್ರುವರಿ 2026, 0:40 IST
ವಿಜಯಪುರ ನಗರದ ಕಾಂಗ್ರೆಸ್‌ ಕಾರ್ಯಾಲಯದ ಸಮೀಪ ಕೋರ್ಟ್‌ ಸರ್ಕಲ್‌ನಲ್ಲಿ ಬಿಜೆಪಿ ಕಾರ್ಯಕರ್ತ ಶನಿವಾರ ಪ್ರತಿಭಟನೆ ನಡೆಸಿದರು
ವಿಜಯಪುರ ನಗರದ ಕಾಂಗ್ರೆಸ್‌ ಕಾರ್ಯಾಲಯದ ಸಮೀಪ ಕೋರ್ಟ್‌ ಸರ್ಕಲ್‌ನಲ್ಲಿ ಬಿಜೆಪಿ ಕಾರ್ಯಕರ್ತ ಶನಿವಾರ ಪ್ರತಿಭಟನೆ ನಡೆಸಿದರು   

ವಿಜಯಪುರ: ಎಐ ಶೃಂಗಸಭೆಗೆ ಅಡ್ಡಿಪಡಿಸಿದ ಕಾಂಗ್ರೆಸ್ ನಡೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು.

ನೂರಾರು ಸಂಖ್ಯೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರನ್ನು ಕೋರ್ಟ್ ವೃತ್ತದ ಬಳಿಯೇ ಬ್ಯಾರಿಕೇಡ್ ಹಾಕಿ ಪೊಲೀಸ್ ಅಧಿಕಾರಿಗಳು ತಡೆಯುವ ಪ್ರಯತ್ನ ಮಾಡಿದರು. ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಬ್ಯಾರಿಕೇಡ್ ನುಗ್ಗಿ ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಅಣಿಯಾಗುತ್ತಿದ್ದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.‌

ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಕಾಪಸೆ, ಕೃತಕ ಬುದ್ಧಿಮತ್ತೆಯಲ್ಲಿ ಭಾರತ ಸಾರ್ವಭೌಮತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಶೃಂಗಸಭೆಗೆ ಅಡ್ಡಿಪಡಿಸಿರುವ ಕಾಂಗ್ರೆಸ್ ನಡೆ ಖಂಡನಾರ್ಹ, ಇದು ದೇಶಕ್ಕೆ ಮಾಡಿದ ಅವಮಾನ ಎಂದರು.

ADVERTISEMENT

ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಇಂತಹ ಘಟನೆಗಳು ನಡೆಯುವುದು ಖಂಡನೀಯ, ಕಾಂಗ್ರೆಸ್ ದೇಶಕ್ಕೆ ನಿಷ್ಠೆ ತೋರಿಸುವುದು ನಿಜವೇ ಆಗಿದ್ದಿದ್ದರೆ ಇಂದು ಜಾಗತಿಕ ಅತಿಥಿಗಳ ಮುಂದೆ ಜಾಗತಿಕ ಎಐ ಸಮ್ಮೇಳನದಲ್ಲಿ ಅರೆಬೆತ್ತಲೆ ಕುಣಿಯುತ್ತಿರಲಿಲ್ಲ. ರಾಜಕೀಯ ವಿರೋಧಕ್ಕಾಗಿ ಇಂತಹ ಕೃತ್ಯ ನಡೆಸಿದವರಿಗೆ ಸಾರ್ವಜನಿಕರೇ ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ ಎಂದರು.

ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರ ಈ ನಡೆ ರಾಷ್ಟ್ರದ ಘನತೆಯನ್ನು ಹಾಳು ಮಾಡುವಂತಿದೆ. ದುಷ್ಟ ಬುದ್ಧಿ ಹೊಂದಿರುವ ಕಾಂಗ್ರೆಸ್ ನಾಯಕರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಈರಣ್ಣ ರಾವೂರ, ಮಹೇಂದ್ರ ನಾಯಕ್, ವಿಜಯಕುಮಾರ ಕುಡಿಗನೂರು, ಭೀಮಾಶಂಕರ ಹದನೂರು, ರಮೇಶ ಬಿದನೂರ, ರಾಜು ಬಿರಾದಾರ, ರವಿಕಾಂತ್ ಬಗಲಿ, ಸಂದೀಪ ಪಾಟೀಲ, ವಿಜಯ್ ಜೋಶಿ, ಕೃಷ್ಣ ಗುನಾಳಕರ್, ರಾಜೇಶ್ ತಾವಸೆ, ಚಿನ್ನು ಚಿನಗುಂಡಿ, ಅಶೋಕ ರಾಠೋಡ ನೇಬಗೇರಿ, ಭೀಮಸಿಂಗ್ ರಾಥೋಡ್, ಸಚಿನ್ ಬೊಂಬಳೆ, ಭರತ್ ಕೋಳಿ, ಭರತ ಕುಲಕರ್ಣಿ, ಚೇತನ ಸಂಗಮ, ರಾಜಕುಮಾರ ಸಗಾಯಿ, ಭಾರತಿ ಬುಯ್ಯಾರ, ವಿಕಾಸ ಪದಕಿ ಬಸಮ್ಮ ಗುಜರಿ, ಜಯಶ್ರೀ ಅಫಜಲಪುರ, ಮಂಥನ ಗಾಯಕವಾಡ, ಅನಿಲ್ ಉಪ್ಪಾರ, ಸಂಗಮೇಶ ಉಕ್ಕಲಿ, ಶೇಖರ್ ಬಾಗಲಕೋಟ, ರಾಜಶೇಖರ ಬಾಗಲಕೋಟ, ಸ್ವರೂಪ ಸಪ್ತಾಳೆ, ವಿನೋದ ಪತ್ತಾರ, ಶಿವರಾಜ್ ಮಡಿವಾಳರ, ವಿವೇಕ ತಾವರಗೇರಿ, ಮಯೂರ ಮಾರ್ಗಾಂವ್ಕರ್, ಸಾಗರ್ ಶೇರಖಾನೆ, ಸಂತೋಷ ಜಾಧವ ಪಾಲ್ಗೊಂಡಿದ್ದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಭಾರತ ಮಾನ ಹರಾಜು ಹಾಕುವ ಪ್ರಯತ್ನ ಮಾಡುವ ಮೂಲಕ ಭಾರತದ ಸಾಂಸ್ಕೃತಿಕತೆ ಹಾಗೂ ತಾಂತ್ರಿಕತೆಯನ್ನೂ ಸಹ ಅಪಮಾನ ಮಾಡಿದೆ 
-ಉಮೇಶ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಜೆಪಿ ಎಸ್.ಸಿ. ಮೋರ್ಚಾ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.