ADVERTISEMENT

ಮುದ್ದೇಬಿಹಾಳ: ನೀರಿನ ಹೊಂಡದಲ್ಲಿ ಬಿದ್ದು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:29 IST
Last Updated 3 ಮಾರ್ಚ್ 2026, 2:29 IST
ಸುದೀಪ್ ಗಂಗನಹಳ್ಳಿ
ಸುದೀಪ್ ಗಂಗನಹಳ್ಳಿ   

ಮುದ್ದೇಬಿಹಾಳ: ಪಟ್ಟಣದ ಕುಂಟೋಜಿ ರಸ್ತೆಯ ಹೊಲದಲ್ಲಿರುವ ಹೊಂಡದಲ್ಲಿ ಕುರಿಗಳಿಗೆ ನೀರು ಕುಡಿಸಲು ಹೋಗಿ ಬಾಲಕ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟ ಘಟನೆ ಭಾನುವಾರ ಸಂಜೆ ಜರುಗಿದೆ. ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆದಿದ್ದಾರೆ.

ಪಟ್ಟಣದ ಆಶ್ರಯ ಕಾಲೊನಿ ನಿವಾಸಿ ಸುದೀಪ್ ಸಾಬಣ್ಣ ಗಂಗನಹಳ್ಳಿ (14) ಮೃತ ಬಾಲಕ. ತಂದೆ ಹಮಾಲಿ ಕೆಲಸ ಮಾಡುತ್ತಾರೆ.

ಸ್ಥಳಕ್ಕೆ ಮುದ್ದೇಬಿಹಾಳ ಅಪರಾಧ ವಿಭಾಗದ ಪಿಎಸ್ಐ ಆರ್.ಎಸ್.ಬಂಗಿ, ಕಾಸು ಸಂಜಯ ತಿಪರೆಡ್ಡಿ, ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ‍ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.