ADVERTISEMENT

ವಿಜಯಪುರ: ಕತ್ನಳ್ಳಿ ಜಾನುವಾರು ಜಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 13:18 IST
Last Updated 1 ಏಪ್ರಿಲ್ 2022, 13:18 IST
ವಿಜಯಪುರ ತಾಲ್ಲೂಕಿನ ಕತಕನಹಳ್ಳಿ  ಗ್ರಾಮದಲ್ಲಿ ಶ್ರೀಗುರು ಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವಕ್ಕೆ ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಶನಿವಾರ ಚಾಲನೆ ನೀಡಿದರು
ವಿಜಯಪುರ ತಾಲ್ಲೂಕಿನ ಕತಕನಹಳ್ಳಿ  ಗ್ರಾಮದಲ್ಲಿ ಶ್ರೀಗುರು ಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವಕ್ಕೆ ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಶನಿವಾರ ಚಾಲನೆ ನೀಡಿದರು   

ವಿಜಯಪುರ: ತಾಲ್ಲೂಕಿನ ಕತಕನಹಳ್ಳಿ (ಕತ್ನಳ್ಳಿ) ಗ್ರಾಮದಲ್ಲಿ ಶ್ರೀಗುರು ಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.

ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಅವರು ಜಾನುವಾರ ಜಾತ್ರೆಗೆ ಚಾಲನೆ ನೀಡಿದರು.

ಚಕ್ರವರ್ತಿ ಸದಾಶಿವ ಶಿವಯೋಗಿಗಳ ದೇವಾಲಯದ ಆವರಣದಲ್ಲಿಶಿವಯ್ಯಾ ಸ್ವಾಮೀಜಿ ಅವರು ಗೋಮಾತೆ ಪೂಜೆ ಸಲ್ಲಿಸಿದರು.

ADVERTISEMENT

ವರ್ಷ ಪರ್ಯಂತ ಭೂಮಿಯಲ್ಲಿ ದುಡಿದು ದಣಿದ ರೈತರು ಕ್ಷೇತ್ರ ದರ್ಶನ, ಜಾತ್ರೆ, ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ದಣಿವಾರಿಸಿಕೊಳ್ಳಬೇಕು ಎಂದು ಸದಾಶಿವ ಅಜ್ಜ ಹೇಳಿದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಉದ್ದಿಮೆ ಡಿ.ಎಸ್. ಗೊಡ್ಡೋಡಗಿ, ಬಾಬುಗೌಡ ಬಿರಾದರ, ಉಮೇಶ ಕಾರಜೋಳ, ಎ.ಪಿ.ಎಂ.ಸಿ ಅಧ್ಯಕ್ಷ ವಿಶ್ವನಾಥ ಪಾಟೀಲ, ಎಸ್. ಡಿ. ಕುಮಾನಿ, ಸಾಹೇಬಗೌಡ ಬಿರಾದಾರ, ಹನಮಲ್ಲ ಸಾರವಾಡ, ಅಶೋಕಗೌಡ ಪಾಟೀಲ, ನಾಗರಾಜ ಲಂಬು, ಸಂಗಮೇಶ ಬಬಲೇಶ್ವರ, ಗಂಗಾಧರ ಸಂಬಣ್ಣಿ, ಭೀಮಶಂಕರ ಹದನೂರ, ಈರಣ್ಣ ಪಟ್ಟಣಶೆಟ್ಟಿ, ಗೋಪಾಲ ಘಟಕಾಂಬಳೆ, ರಾಜು ಪಾಟೀಲ ಸುತ್ತಲಿನ ಗ್ರಾಮದ ರೈತ ಬಾಂಧವರು ಭಾಗವಹಿಸಿದ್ದರು.

ಜಾತ್ರೆಯ ಅಂಗವಾಗಿ ಕೃಷಿ ಮೇಳ, ಕೆಸರಿನಲ್ಲಿ ಓಡುವ ಸ್ಪರ್ಧೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ಡೊಳ್ಳಿನ ಪದಗಳು, ನೇಗಿಲ ಜಗ್ಗುವ ಸ್ಪರ್ಧೆ, ಉಚಿತ ಆರೋಗ್ಯ ಮೇಳ, ಸರಳ ಸಾಮೂಹಿಕ ವಿವಾಹ, ಭಾರ ಎತ್ತುವ ಸ್ಪರ್ಧೆ, ಜಂಗಿ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.