ಚಡಚಣ: ಇತ್ತೀಚೆಗೆ ಝಳಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಭೀಮಾ ನದಿ ತೀರದಲ್ಲಿ ಕಳವಾಗಿದ್ದ ರೈತರ ಪಂಪ್ ಸೆಟ್ ಗಳನ್ನು ವಶಪಡಿಸಿಕೊಂಡಿದ್ದ ಝಳಕಿ ಪೊಲೀಸ್ ಠಾಣೆ ಸಿಬ್ಬಂದಿ ಶುಕ್ರವಾರ ರೈತರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಝಳಕಿ ಠಾಣಾ ಪಿಎಸ್‌ಐ ಮಂಜುನಾಥ ತಿರಕ್ಕನ್ನವರ, ‘ಸಿಪಿಐ ಸುರೇಶ ಬೆಂಡಗುಂಬಳ ಅವರ ಮಾರ್ಗದರ್ಶನದಲ್ಲಿ ನಮ್ಮ ಸಿಬ್ಬಂದಿಯನ್ನು ತನಿಖೆಗೆ ನಿಯೋಜಿಸಿ ಕಳ್ಳತನ ಮಾಡಿದ ವ್ಯಕ್ತಿಗಳಿಂದ ವಶಪಡಿಸಿಕೊಂಡು ಹಸ್ತಾಂತರಿಸುತ್ತಿದ್ದೇವೆ’ ಎಂದರು.
‘ನಿಮ್ಮ ಜಮೀನಿನ ಸುತ್ತ ಮುತ್ತ ಹೊಸದಾಗಿ ಬರುವ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೋಲಿಸ್ ಠಾಣೆಗೆ ಮಾಹಿತಿ ನೀಡಿ’ ಎಂದರು.
ಕಾರ್ಯಾಚರಣೆಯಲ್ಲಿ ಎಮ್ ಎಫ್ ಬಿರಾದಾರ, ಗಣೇಶ ಮೇತ್ರಿ, ರಾಹುಲ ಗಿರಣ್ಣಿವಡ್ಡರ, ಬಿ ಎಸ್ ದೇವರ, ಎಸ್ ಬಿ ಪಾತ್ರೋಟ, ಎಲ್.ಕೆ ಬೋಮ್ಮನಹಳ್ಳಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.