ADVERTISEMENT

ವಿಜಯಪುರ: ವಿಕ್ರಂ ಲ್ಯಾಂಡರ್ ಯಶಸ್ಸಿಗೆ ಸರ್ವಾರ್ಥ ಸಿದ್ಧಿ ಯಾಗ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 14:16 IST
Last Updated 22 ಆಗಸ್ಟ್ 2023, 14:16 IST
ವಿಜಯಪುರ ನಗರದ ಸರ್ವಜ್ಞ ವಿದ್ಯಾವಿಹಾರ ಪೀಠದ ಆವರಣದಲ್ಲಿ ಚಂದ್ರನ ಮೇಲ್ಮೈ ಮೇಲೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಭೂಸ್ಪರ್ಶ ಮಾಡಲಿ ಎಂದು ಸರ್ವಾರ್ಥ ಸಿದ್ದಿ ಯಾಗ ನೆರವೇರಿಸಲಾಯಿತು.
ವಿಜಯಪುರ ನಗರದ ಸರ್ವಜ್ಞ ವಿದ್ಯಾವಿಹಾರ ಪೀಠದ ಆವರಣದಲ್ಲಿ ಚಂದ್ರನ ಮೇಲ್ಮೈ ಮೇಲೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಭೂಸ್ಪರ್ಶ ಮಾಡಲಿ ಎಂದು ಸರ್ವಾರ್ಥ ಸಿದ್ದಿ ಯಾಗ ನೆರವೇರಿಸಲಾಯಿತು.   

ವಿಜಯಪುರ: ನಗರದ ಸರ್ವಜ್ಞ ವಿದ್ಯಾವಿಹಾರ ಪೀಠದ ಆವರಣದಲ್ಲಿ ಯುವ ಭಾರತ ಸಮಿತಿ ಹಾಗೂ ಸರ್ವಜ್ಞ ವಿಹಾರ ವಿದ್ಯಾಪೀಠದ ಸಹಯೋಗದಲ್ಲಿ ಚಂದ್ರನ ಮೇಲ್ಮೈ ಮೇಲೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಭೂಸ್ಪರ್ಶ ಮಾಡಲಿ ಎಂದು ಸರ್ವಾರ್ಥ ಸಿದ್ದಿ ಯಾಗವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ಸಂಜೀವಾಚಾರ್ಯ ಮಧಬಾವಿ ನೇತೃತ್ವದಲ್ಲಿ ನಡೆದ ಸೂಕ್ತ ಹೋಮ, ಪುರುಷ ಸೂಕ್ತ ಹೋಮ, ನವಗ್ರಹ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

‘ನರಸಿಂಹ ದೇವರ ಆರಾಧನೆಯಿಂದ ವಿಘ್ನ, ಅಡೆತಡೆಗಳು ಸಂಭವಿಸುವುದಿಲ್ಲ. ಹೀಗಾಗಿ ಚಂದ್ರನ ಅಂಗಳಕ್ಕೆ ವಿಕ್ರಂ ಲ್ಯಾಂಡರ್ ಯಶಸ್ವಿ ಆಗಿ ಭೂಸ್ಪರ್ಶ ಮಾಡಲೆಂದು ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಜೀವಾಚಾರ್ಯ ಮಧಬಾವಿ ವಿವರಿಸಿದರು.

ADVERTISEMENT

ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಮಾತನಾಡಿದರು.

ಕಲಾವಿದ ತುಕಾರಾಮ ಬೆಣ್ಣೂರ ವಿಕ್ರಂ ಲ್ಯಾಂಡರ್ ಹಾಗೂ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಬೃಹತ್‌ ರಂಗೋಲಿ ಬಿಡಿಸಿ ಗಮನ ಸೆಳೆದರು. ಶರಣು ಹಿರಾಪುರ, ಪ್ರಾಣೇಶ ಜಾಗಿರದಾರ, ವಿರೇಶ ಗೋಬ್ಬೂರ, ಸತೀಶ ಬಾಗಿ, ಗಿರೀಶ ಕುಲಕರ್ಣಿ, ಸಂತೋಷ ಝಳಕಿ, ಶರಣು ಸಬರದ, ಸಾಗರ ಗಾಯಕವಾಡ, ರಾಜೇಂದ್ರ ವಾಲಿ, ಮಲ್ಲು ಹಿಪ್ಪರಗಿ, ವಿನೋದಕುಮಾರ ಮಣೂರ ಇದ್ದರು. 

ವಿಜಯಪುರದಲ್ಲಿ ಜರುಗಿದ ಸರ್ವಾರ್ಥ ಸಿದ್ಧಿ ಯಾಗ ಧಾರ್ಮಿಕ ಕಾರ್ಯಕ್ರಮದಲ್ಲಿ ಕಲಾವಿದ ತುಕಾರಾಮ ಬೆಣ್ಣೂರ ಅವರ ವಿಕ್ರಂ ಲ್ಯಾಂಡರ್ ಹಾಗೂ ಬಾಹ್ಯಾಕಾಶದ ರಂಗೋಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.