ADVERTISEMENT

ಆಲಮಟ್ಟಿ| ಕೃಷ್ಣೆಯ ಜಲಧಿಗೆ ಸಿಎಂ ಬೊಮ್ಮಾಯಿ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 5:36 IST
Last Updated 30 ಸೆಪ್ಟೆಂಬರ್ 2022, 5:36 IST
ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಜಲಧಿಗೆ ಆಲಮಟ್ಟಿಯ ಲಾಲ್ ಬಹದ್ದೂರ್  ಶಾಸ್ತ್ರಿ  ಸಾಗರ ಜಲಾಶಯದ ಬಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಬಾಗಿನ ಅರ್ಪಿಸಿದರು.
ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಜಲಧಿಗೆ ಆಲಮಟ್ಟಿಯ ಲಾಲ್ ಬಹದ್ದೂರ್  ಶಾಸ್ತ್ರಿ  ಸಾಗರ ಜಲಾಶಯದ ಬಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಬಾಗಿನ ಅರ್ಪಿಸಿದರು.   

ವಿಜಯಪುರ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಜಲಧಿಗೆ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯದ ಬಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಬಾಗಿನ ಅರ್ಪಿಸಿದರು.

ಸಾಂಪ್ರದಾಯಿಕವಾಗಿ ಜಲಾಶಯದ ಬಳಿ ಗಂಗಾ ಪೂಜೆ ಸಲ್ಲಿಸಿದ ನಂತರ ಕೃಷ್ಣೆಗೆ ಬಾಗಿನ ಸಲ್ಲಿಸಿದರು.
ಸೀರೆ, ಕುಪ್ಪಸ, ಹಣ್ಣು, ಹೂವು ಕಾಯಿ ಸೇರಿ ನಾನಾ ಪೂಜೆ ಹಾಗೂ ಉಡಿ ತುಂಬುವ ಸಾಮಗ್ರಿಯುಳ್ಳ ಬಾಗಿನವನ್ನು ಕೃಷ್ಣೆಯ ಮಡಲಿಗೆ ಮುಖ್ಯಮಂತ್ರಿಗಳು ಸಮರ್ಪಿಸಿದರು.

ಶುಕ್ರವಾರ ಬೆಳಿಗ್ಗೆ 10 ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಹುಬ್ಬಳ್ಳಿಯಿಂದ ಆಲಮಟ್ಟಿಗೆ ಆಗಮಿಸಿದ ಮುಖ್ಯಮಂತ್ರಿಗಳು ನೇರವಾಗಿ ಜಲಾಶಯಕ್ಕೆ ತೆರಳಿ ಗಂಗಾ ಪೂಜೆ ಸಲ್ಲಿಸಿ ಬಾಗಿನ ಸಲ್ಲಿಸಿದರು.

ADVERTISEMENT

ಬೊಮ್ಮಾಯಿ ಅವರಿಗೆ ರೇಷ್ಮೆ ಪಟಕಾ ಸುತ್ತಿ ಸ್ವಾಗತಕೋರಲಾಯಿತು. ಬಾಗಿನ ಸ್ಥಳದಲ್ಲಿ ನಾನಾ ಹೂವು, ಸಸ್ಯ, ಬಾಳೆ ಕಂಬ, ತಳಿರು ತೋರಣ, ವರ್ಣಮಯ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿತ್ತು.

ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಶಿವಾನಂದ ಪಾಟೀಲ, ವೀರಣ್ಣ ಚರಂತಿಮಠ, ಸೋಮನಗೌಡ ಪಾಟೀಲ, ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹಿರೇಮಠ ಸೇರಿ ಹಲವರು ಇದ್ದರು. ಯಲಗೂರದ ಗೋಪಾಲಾಚಾರ್ಯ ಹಿಪ್ಪರಗಿ ನೇತೃತ್ವದಲ್ಲಿ ನಾಲ್ವರು ವೈಧಿಕರು ಗಂಗಾ ಪೂಜೆ, ಬಾಗಿನದ ಪೂಜೆ ನೆರವೇರಿಸಿದರು.

ಜಲಸಂಪನ್ಮೂಲ ಇಲಾಖೆಯ ಹೆಚ್ಚವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಕೆ.ಬಿ. ಕುಲಕರ್ಣಿ, ಕೆಬಿಜೆಎನ್ ಎಲ್ ಎಂ.ಡಿ. ಬಿ.ಎಸ್. ಶಿವಕುಮಾರ, ಮುಖ್ಯ ಎಂಜಿನಿಯರ್ ಎಚ್. ಸುರೇಶ, ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ.ಬಸವರಾಜ ಇನ್ನೀತರರು ಇದ್ದರು.

ಬ್ಯಾನರ್, ಫ್ಲೆಕ್ಸ್

ಮುಖ್ಯಮಂತ್ರಿಗಳನ್ನು ಸ್ವಾಗತಿಸುವ ಬ್ಯಾನರ್, ಫ್ಲೆಕ್ಸ್ ಗಳು ಇಡೀ ಆಲಮಟ್ಟಿಯಾದ್ಯಂತ ರಾರಾಜಿಸಿದವು. ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು, ಬೆಳಿಗ್ಗೆ ಉದ್ಯಾನವನ್ನು ಬಂದ್ ಮಾಡಲಾಗಿತ್ತು.

ಭೂಮಿ ಪೂಜೆ

ಆಲಮಟ್ಟಿಯ ವೀವ್ ಪಾಯಿಂಟ್ ಬಳಿ ₹ 14.5 ಕೋಟಿ ವೆಚ್ಚದ ನೂತನ ಪ್ರವಾಸಿ ಮಂದಿರಕ್ಕೂ ಸಿ.ಎಂ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಭೂಮಿ ಪೂಜೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.